ಏಷ್ಯಾ ಕಪ್ 2018: ಭಾರತ ವಿರುದ್ಧದ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ನನ್ನ ಫೇವರಿಟ್- ಗವಾಸ್ಕರ್

ದುಬೈನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಇಂದು ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಟೀಂ ಇಂಡಿಯಾ ಮುಖ್ಯ ತರಬೇತಿದಾರ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು
Updated on: 

ನವದೆಹಲಿ: ದುಬೈನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ  ಇಂದು ನಡೆಯಲಿರುವ  ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲುವ  ನೆಚ್ಚಿನ ತಂಡವಾಗಿದೆ ಎಂದು ಟೀಂ ಇಂಡಿಯಾ ಮುಖ್ಯ ತರಬೇತಿದಾರ  ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ನಡುವಿನ ಪಂದ್ಯ ಯಾವಾಗಲೂ ಭಾವೋದ್ವೇಗದಿಂದ ಕೂಡಿದ್ದು,  ಕಳೆದ ವರ್ಷ ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ  ಪಾಕಿಸ್ತಾನ  ಭಾರತದ ವಿರುದ್ಧ 180 ರನ್ ಗಳಿಂದ ಗೆಲುವು ಸಾಧಿಸಿತ್ತು.

ನಿನ್ನೆ ಹಾಂಗ್ ಕಾಂಗ್  ವಿರುದ್ಧ ಕೇವಲ 26 ರನ್ ಅಂತರದಲ್ಲಿ ಭಾರತ ಗೆಲುವು ಸಾಧಿಸಿದ್ದರೆ ಪಾಕಿಸ್ತಾನ ಇದೇ ಎದುರಾಳಿ ವಿರುದ್ಧ ಭಾನುವಾರ  ಭರ್ಜರಿ ಗೆಲುವು ದಾಖಲಿಸಿತ್ತು.

ಚಾಂಫಿಯನ್ ಟ್ರೋಪಿ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ್ದ ಪಾಕಿಸ್ತಾನ ಆತ್ಮಸ್ಥೈರ್ಯ ಹೆಚ್ಚಿದ್ದು,  ಪಾಕಿಸ್ತಾನವೇ ಗೆಲ್ಲುವ ನೆಚ್ಚಿನ ತಂಡವಾಗಿದೆ . ವಿರಾಟ್ ಕೊಹ್ಲಿ ಅನುಪಸ್ಥಿತಿ ಕಾಡಲಿದೆ ಎಂದು   ಸುನೀಲ್ ಗವಾಸ್ಕರ್ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

 ಇಂಗ್ಲೆಂಡ್  ಟೆಸ್ಟ್ ನಲ್ಲಿ ಹೀನಾಯ ಸೋಲಿನ ಬಳಿಕ ವಿರಾಟ್ ಕೊಹ್ಲಿ ಏಷ್ಯಾ ಕಪ್ ನಿಂದ  ಹೊರಗುಳಿದಿದ್ದು, ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಗವಾಸ್ಕರ್ ಹೇಳಿಕೆಯನ್ನು ಇಂಡಿಯಾ ಮಾಜಿ ಬ್ಯಾಟ್ಸ್ ಮನ್  ಸಂಜಯ್ ಮಂಜೆರ್ಕರ್ ಕೂಡಾ ಸಮರ್ಥಿಸಿಕೊಂಡಿದ್ದಾರೆ. 2009 ರಿಂದ  ದುಬೈ ಪಾಕಿಸ್ತಾನ ತವರು ನೆಲವಾಗಿದ್ದು, ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆ ದೇಶದ ಆಟಗಾರರು ಹೊಂದಿಕೊಳ್ಳಲಿದ್ದಾರೆ ಎಂದು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com