ಏಷ್ಯಾಕಪ್: ಟೀಂ ಇಂಡಿಯಾ ದಾಳಿಗೆ ಬಾಂಗ್ಲಾ ತತ್ತರ, 173 ರನ್ ಗೆ ಆಲೌಟ್

ಏಷ್ಯಾ ಕಪ್ 2018 ಪಂದ್ಯಾವಳಿಯ ಸೂಪರ್ ಪೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ 50 ಓವರ್ ಗಳಲ್ಲಿ 173 ರನ್ ಗಳಿಸುವಷ್ಟರಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಏಷ್ಯಾಕಪ್: ಟೀಂ ಇಂಡಿಯಾ ದಾಳಿಗೆ ಬಾಂಗ್ಲಾ ತತ್ತರ, 173 ರನ್ ಗೆ ಆಲೌಟ್
ಏಷ್ಯಾಕಪ್: ಟೀಂ ಇಂಡಿಯಾ ದಾಳಿಗೆ ಬಾಂಗ್ಲಾ ತತ್ತರ, 173 ರನ್ ಗೆ ಆಲೌಟ್
Updated on: 
ದುಬೈ: ಏಷ್ಯಾ ಕಪ್ 2018 ಪಂದ್ಯಾವಳಿಯ ಸೂಪರ್ ಪೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ 50 ಓವರ್ ಗಳಲ್ಲಿ 173 ರನ್ ಗಳಿಸುವಷ್ಟರಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಟಾಸ್ ಗೆದ್ದ ಟೀಮ್‌ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿದ್ದು ಬಾಂಗ್ಲಾಗೆ ಮೊದಲು ಬ್ಯಾಟಿಂಗ್ ಅವಕಾಶ ನೀಡಿತು.
ಆದರೆ ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾಗೆ ಉತ್ತಮ ಪ್ರಾರಂಭ ದಿರಕಿಸುವಲ್ಲಿ ಆರಂಭಿಕ ಆಟಗಾರರು ವಿಫಲರಾಗಿದ್ದರು.ದಾಸ್ ಮತ್ತು ನಜಮುಲ್‌ ಹೊಸೇನ್‌ ಇಬ್ಬರೂ ತಲಾ 7  ರನ್ ಗಳನ್ನಷ್ಟೇ ಗಳಿಸಲಷ್ಟೇ ಶಕ್ಯರಾದರು.

ಇನ್ನು ಬಾಂಗ್ಲಾ ಪರ  ಮೆಹದಿ ಹಸನ್‌ 42 ರನ್‌ ಗಳಿಸಿದ್ದೇ ತಂಡದ ಅಟಗಾರರ ಪೈಕಿ ಗರಿಷ್ಠ ಸ್ಕೋರ್ ಗಳಿಕೆಯಾಗಿತ್ತು. ಉಳಿದಂತೆ ಮಹಮೂದುಲ್ಲಾ 25, ಮುಷ್ಫಿಕೂರ್ ರಹೀಮ್ 21 ಮಶ್ರಾಫೆ ಮೊರ್ತಾಜಾ 26 ರನ್ ಗಳಿಸಿದ್ದರೆ ಉಳಿದವರೆಲ್ಲ 20ರ ಗಡಿಯನ್ನೂ ತಲುಪಲಿಲ್ಲ.

ಹೀಗೆ ಒಟ್ಟಾರೆ 49.1 ಓವರ್ ಗಳಲ್ಲಿ ಬಾಂಗ್ಲಾ ಹತ್ತು ವಿಕೆಟ್ ನಷ್ಟಕ್ಕೆ 173ರನ್ ಕಲೆಹಾಕಿದೆ.

ಭಾರತದ ಭುವನೇಶ್ವರ್ ಕುಮಾರ್ ಮತ್ತು ಬೂಮ್ರಾ ತಲಾ 3 ರವೀಂದ್ರ ಜಡೇಜಾ 4 ವಿಕೆಟ್ ಪಡೆದು ಮಿಂಚಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com