ಇದು ಕ್ರಿಕೆಟ್.. ಫುಟ್ಬಾಲ್ ಅಲ್ಲ.. ಕೋಚ್ ಗೆ ಹಿಂದಿನ ಕುರ್ಚಿಯೇ ಉತ್ತಮ: ಸೌರವ್ ಗಂಗೂಲಿ ಹೇಳಿದ್ದು ಯಾರಿಗೆ?

ಕ್ರಿಕೆಟ್ ಎಂಬುದು ನಾಯಕನ ಮೇಲೆ ಆಧಾರಿತವಾದ ಕ್ರೀಡೆಯೇ ಹೊರತು ಫುಟ್ಬಾಲ್ ನಂತೆ ಕೋಚ್ ಆಧಾರಿತ ಕ್ರೀಡೆಯಲ್ಲ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕ್ರಿಕೆಟ್ ಎಂಬುದು ನಾಯಕನ ಮೇಲೆ ಆಧಾರಿತವಾದ ಕ್ರೀಡೆಯೇ ಹೊರತು ಫುಟ್ಬಾಲ್ ನಂತೆ ಕೋಚ್ ಆಧಾರಿತ ಕ್ರೀಡೆಯಲ್ಲ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ತಮ್ಮ ಆತ್ಮಚರಿತೆ 'ಎ ಸೆಂಚುರಿ ಈಸ್ ನಾಟ್ ಎನಫ್' ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗಂಗೂಲಿ.. ಕ್ರಿಕೆಟ್ ತಂಡದಲ್ಲಿ ಯಾವಾಗಲೂ ನಾಯಕನೇ ಪ್ರಮುಖ ಪಾತ್ರ ನಿರ್ವಹಿಸುತ್ತಾನೆ. ಆದರೆ ಈಗಿನ ಕೆಲ ಕೋಚ್ ಗಳು ತಾವೇ ತಂಡವನ್ನು ಮುನ್ನಡೆಸುವ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ ನನ್ನ ಅಭಿಪ್ರಾಯದಂತೆ ಇದು ಕ್ರಿಕೆಟ್.. ಫುಟ್ಬಾಲ್ ಅಲ್ಲ. ಫುಟ್ಬಾಲ್ ನಲ್ಲಿ ಕೋಚ್ ನ ನಿರ್ಣಯಗಳ ಪ್ರಮುಖವಾಗಿರುತ್ತವೆ. ಆದರೆ ಇಲ್ಲಿ ನಾಯಕನೇ ನಿರ್ಣಾಯಕ. ಎಲ್ಲ ಆಟಗಾರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಉತ್ತೇಜನ ನೀಡಿ ಉತ್ತಮ ಪ್ರದರ್ಶನ ನೀಡುವಂತೆ ಮಾಡುವುದು ಓರ್ವ ನಾಯಕನ ಜವಾಬ್ದಾರಿ ಎಂದು ಹೇಳಿದ್ದಾರೆ.
ಇದೇ ವೇಳೆ ಸೌರವ್ ಗಂಗೂಲಿ ಪರೋಕ್ಷವಾಗಿ ತಮ್ಮ ಮಾಜಿ ಕೋಚ್ ಗ್ರೇಗ್ ಚಾಪೆಲ್ ಅವರಿಗೂ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದು, ಅಂತೆಯೇ ಹಾಲಿ ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಬಗ್ಗೆಯೂ ಪರೋಕ್ಷ ವ್ಯಂಗ್ಯ ಮಾಡಿದ್ದಾರೆ. ತಂಡದ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗಂಗೂಲಿ ಆಡುವ 11ರ ಬಳಗವನ್ನು ಆಯ್ಕೆ ಮಾಡಬೇಕಿರುವುದು ಯಾರು.. ನಾಯಕ ವಿರಾಟ್ ಕೊಹ್ಲಿಯೇ ಅಥವಾ ಕೋಚ್ ರವಿಶಾಸ್ತ್ರಿಯೇ ಎಂದು ಪ್ರಶ್ನಿಸುವ ಮೂಲಕ ರವಿ ಶಾಸ್ತ್ರಿ ನಿರ್ಧಾರಕ್ಕೆ ಪರೋಕ್ಷ ಅಸಮಾಧಾನ ವ್ಯ್ಯಕ್ತಪಡಿಸಿದ್ದಾರೆ.
ಅಂತೆಯೇ ನಾಯಕ ವಿರಾಟ್ ಕೊಹ್ಲಿ ಕುರಿತೂ ಪರೋಕ್ಷ ಟೀಕೆ ಮಾಡಿರುವ ಸೌರವ್ ಗಂಗೂಲಿ ತಂಡದ ಆಯ್ಕೆಯಲ್ಲಿ ನಾಯಕನ ನಿರ್ಧಾರಕ್ಕೇ ಮಹತ್ವ ನೀಡಬೇಕು, ನಾಯಕ ಕೂಡ ತನ್ನ ನಿರ್ಧಾರದ ಬಗ್ಗೆ ಖಚಿತತೆಯಿಂದರಬೇಕು ಎಂದು ಹೇಳುವ ಮೂಲಕ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿನ ಕೊಹ್ಲಿ ನಿರ್ಧಾರವನ್ನು ಟೀಕಿಸಿದ್ದಾರೆ.
ಅಂತೆಯೇ ಹಾಲಿ ಏಷ್ಯಾ ಕಪ್ ಟೂರ್ನಿ ಕುರಿತು ಮಾತನಾಡಿದ ಗಂಗೂಲಿ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಪ್ರಸ್ತುತ ಕಳೆಪ ಪ್ರದರ್ಶನ ನೀಡುತ್ತಿರಬಹುದು. ಆದರೆ ಇದೊಂದು ಹಂತವಷ್ಟೇ.. ಅದರೆ ಗಮನವಿರಲಿ ಅವು ಕ್ರಿಕೆಟ್ ಲೋಕದ ಬಲಿಷ್ಠ ತಂಡಗಳು ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com