ಅಮೆರಿಕಾ: ಕಾರ್ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು, ಫೋಟೋ ವೈರಲ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು,

Published: 22nd December 2018 12:00 PM  |   Last Updated: 22nd December 2018 05:22 AM   |  A+A-


Captain Cool a hit across US, fans sport 'MS Dhoni' number plates

ಎಂಎಸ್ ಧೋನಿ, ಅಭಿಮಾನಿ ಕಾರ್

Posted By : LSB
Source : The New Indian Express
ಚೆನ್ನೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಅಮೆರಿಕದಲ್ಲಿರುವ ಅಭಿಮಾನಿಯೊಬ್ಬರು ತಮ್ಮ ಕಾರಿನ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರನ್ನು ಬರೆದುಕೊಂಡಿದ್ದಾರೆ.

ಈ ಹಿಂದೆ ಐಪಿಎಲ್ ವೇಳೆ ಅಭಿಮಾನಿಯೊಬ್ಬ ತನ್ನ ಮೈಯೆಲ್ಲಾ ಹಳದಿ ಬಣ್ಣವನ್ನು ಬಳಿದುಕೊಂಡು ಧೋನಿಗೆ ಗೌರವ ಸೂಚಿಸಿದ್ದ. ಈಗ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿರುವ ಅಭಿಮಾನಿಯೊಬ್ಬರು ತಮ್ಮ ಕಾರಿನ ಹಿಂಭಾಗದ ನಂಬರ್ ಪ್ಲೇಟ್‍ನಲ್ಲಿ ಧೋನಿ ಹೆಸರನ್ನು ಬರೆದುಕೊಂಡಿದ್ದಾರೆ. ಇದನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ತಮ್ಮ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿ ಅದ್ಭುತ ಎಂದು ಟ್ವೀಟ್​ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೆನ್ನೈ ಅಭಿಮಾನಿಗಳು ವಿಸಿಲ್​ ಪೋಡು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನನ್ನ ಸ್ನೇಹಿತ ಈ ಫೋಟೋವನ್ನು ತೆಗೆದಿದ್ದಾನೆ. ಕಾರು ಯಾರದ್ದೇ ಆಗಿದ್ದರು, ಆತ ಧೋನಿಯ ಬಹುದೊಡ್ಡ ಅಭಿಮಾನಿ ಎಂದು ತಿಳಿಯುತ್ತದೆ ಎಂದು ಮಯಾಂಕ್ ಮೊಂದಲ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಇದೇ ಟ್ವೀಟ್‍ಗೆ ರೀಟ್ವೀಟ್ ಮಾಡಿಕೊಂಡ ಸಿಎಸ್‍ಕೆ ತಂಡ, ವಾವ್, ಲೆಜೆಂಡ್ರಿ ಸೊಪ್ನಸುಂದರಿ ಈಗ ಲಾಸ್ ಏಂಜಲೀಸ್ ನಲ್ಲಿದ್ದಾಳೆ ಎಂದು ಬರೆದುಕೊಂಡಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp