ಕ್ರಿಕೆಟ್
ಐಪಿಎಲ್ 12ನೇ ಸೀಸನ್ ಗೂ ತಟ್ಟಿದ ಬೆಟ್ಟಿಂಗ್ ಭೂತ; ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ಬಂಧನ
ಐಪಿಎಲ್ 12ನೇ ಆವೃತ್ತಿ ಟೂರ್ನಿಗೂ ಬೆಟ್ಟಿಂಗ್ ಭೂತದ ಕರಿನೆರಳು ಅಂಟಿಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ತುಷಾರ್ ಆರೋಟೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಅಹ್ಮದಾಬಾದ್: ಐಪಿಎಲ್ 12ನೇ ಆವೃತ್ತಿ ಟೂರ್ನಿಗೂ ಬೆಟ್ಟಿಂಗ್ ಭೂತದ ಕರಿನೆರಳು ಅಂಟಿಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ತುಷಾರ್ ಆರೋಟೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
2013ರಲ್ಲಿ ಜಗತ್ತಿನಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಐಪಿಎಲ್ ಬೆಟ್ಟಿಂಗ್ ಪ್ರಕರಣ ಸಂಬಂಧ ಸಿಎಸ್ ಕೆ ಮೇಲ್ವಿಚಾರಕ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಶಿಕ್ಷೆ ಎದುರಿಸಿದ್ದರು. ಅಂತೆಯೇ ಅಂದು ಪಿಕ್ಸಿಂಗ್ ಆರೋಪ ಹೊತ್ತಿದ್ದ ಕ್ರಿಕೆಟಿಗ ಶ್ರೀಶಾಂತ್ ಕೂಡ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಈ ಪಟ್ಟಿಗೆ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ತುಷಾರ್ ಅರೋಟೆ ಸೇರ್ಪಡೆಯಾಗಿದ್ದಾರೆ.
ಗುಜರಾತ್ ನ ವಡೋದರ ಕ್ರೈಂ ಬ್ರಾಂಚ್ ಪೊಲೀಸರು ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ತುಷಾರ್ ಅರೋಟೆ ಸೇರಿದಂತೆ 19 ಮಂದಿಯನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸಿದ್ದಾರೆ. ಇದಕ್ಕೂ ಮೊದಲು ತುಷಾರ್ ಅರೋಟೆ ಅವರ ಮೊಬೈಲ್ ಕಾಲ್ ಲಿಸ್ಟ್ ಅನ್ನು ಪರಿಶೀಲಿಸಿದ್ದ ಪೊಲೀಸರು, ಅಲ್ಲಿ 19 ವ್ಯಕ್ತಿಗಳ ನಂಬರ್ ಕಂಡುಬಂದಿತ್ತು. ಈ ಪೈಕಿ ಬುಕ್ಕಿ ಹೇಮಂಗ್ ಗೆ ಸೇರಿದ್ದ ನಂಬರ್ ಕೂಡ. ಹೇಮಂಗ್ ತುಷಾರ್ ಅವರಿಗೆ ವಿವಿಧ ನಂರ್ ಗಳಿಂದ ಹಲವು ಬಾರಿ ಕರೆ ಮಾಡಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಇನ್ನು ಈ ಹಿಂದೆ ಭಾರತ ಮಹಿಳಾ ತಂಡ ಹಾಗೂ ನಾಯಕಿ ಮಿಥಾಲಿ ರಾಜ್ ಜೊತೆ ಗುದ್ದಾಟ ನಡೆಸಿದ ತುಷಾರ್ ಆರೋಟೆಯನ್ನು ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ತುಷಾರ್ ಅರೋಟೆ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡ 2017ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಇದೀಗ ಬೆಟ್ಟಿಂಗ್ ಆರೋಪದಡಿ ಬಂಧನಕ್ಕೊಳಗಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.