ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಟಿಂಗ್, ಫಿರೋಜ್ ಶಾ ಕೋಟ್ಲಾ ಪಿಚ್ ಅತ್ಯಂತ ಕಳಪೆಯಾಗಿದೆ. ಹಾಗಾಗಿ, ಪಂದ್ಯ ಸೋಲಬೇಕಾಯಿತು. ಪಂದ್ಯಕ್ಕೂ ಮುನ್ನ ಪಿಚ್ ಕ್ಯೂರೇಟರ್ ಬಳಿ ಮಾತನಾಡಿದಾಗ, ಪಿಚ್ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ, ಪಂದ್ಯದ ವೇಳೆ ಪಿಚ್ ಸ್ವಲ್ಪ ಬೌನ್ಸಿ ಹಾಗೂ ನಿಧಾನ ಗತಿಯಿಂದ ಕೂಡಿತ್ತು ಎಂದು ಪಿಚ್ ಕ್ಯೂರೇಟರ್ ವಿರುದ್ಧ ದೂರಿದರು.