ಕುಲದೀಪ್ ಯಾದವ್
ಕುಲದೀಪ್ ಯಾದವ್

ಆರ್‌ಸಿಬಿಯ ಮೊಹಿನ್ ಅಲಿ ಆರ್ಭಟಕ್ಕೆ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ವಿಶ್ವಕಪ್‌ಗೆ ಆಯ್ಕೆಯಾಗಿರುವ ಕುಲದೀಪ್, ವಿಡಿಯೋ!

2019ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ ಅಲ್ಲೊಂದು ಇಲ್ಲೊಂದು ಪಂದ್ಯ ಗೆದ್ದಿದೆ. ಟೂರ್ನಿಯಲ್ಲಿ ಎರಡು ಪಂದ್ಯ ಮಾತ್ರ ಗೆದ್ದಿದೆ. ಇನ್ನು ನಿನ್ನೆ ನಡೆದ ಕೋಲ್ಕತ್ತಾ...
Published on
ಬೆಂಗಳೂರು: 2019ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ ಅಲ್ಲೊಂದು ಇಲ್ಲೊಂದು ಪಂದ್ಯ ಗೆದ್ದಿದೆ. ಟೂರ್ನಿಯಲ್ಲಿ ಎರಡು ಪಂದ್ಯ ಮಾತ್ರ ಗೆದ್ದಿದೆ. ಇನ್ನು ನಿನ್ನೆ ನಡೆದ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ತನ್ನ ಓವರ್ ನಲ್ಲಿ ಮೊಹಿನ್ ಅಲಿ ಸ್ಫೋಟಕ ಬ್ಯಾಟಿಂಗ್ ನೋಡಿ ಕುಲದೀಪ್ ಯಾದವ್ ಮೈದಾನದಲ್ಲೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ತಂಡ ಕುಲದೀಪ್ ಯಾದವ್ ಅವರ ಒಂದು ಓವರ್ ನಲ್ಲಿ ಮೊಹಿನ್ ಅಲಿ 27 ರನ್ ಬಾರಿಸಿದ್ದರು. ಇದರಿಂದ ನೊಂದಿದ್ದ ಕುಲದೀಪ್ ಯಾದವ್ ಫೀಲ್ಡಿಂಗ್ ಮಾಡುವಾಗ ಕಣ್ಣೀರು ಹಾಕಿರುವ ಘಟನೆ ನಡೆದಿದೆ. 
ಈ ವೇಳೆ ಸಹ ಆಟಗಾರರು ವಿಶ್ವಕಪ್ ಗೆ ಆಯ್ಕೆಯಾಗಿರುವ ಕುಲದೀಪ್ ಅವರನ್ನು ಬಹುವಾಗಿ ಸಂತೈಸಿದರು. ಕುಲದೀಪ್ ಮಾತ್ರ ಕಣ್ಣೀರು ಹಾಕಿದ್ದರು. 
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ನಿಗದಿತ ಓವರ್ ನಲ್ಲಿ 213 ರನ್ ಪೇರಿಸಿತ್ತು. 214 ರನ್ ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡವನ್ನು 203 ರನ್ ಗಳಿಗೆ ಕಟ್ಟಿಹಾಕಿ 10 ರನ್ ಗಳಿಂದ ಜಯಗಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com