ಗೆದ್ದ ಖುಷಿಯಲ್ಲಿ ಲಂಕಾ ಆಟಗಾರರ ಎಡವಟ್ಟು: ಮೈದಾನದಲ್ಲಿ ನಡೆದಿದ್ದೇನು? ವಿಡಿಯೋ ವೈರಲ್!

ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮುಖಭಂಗಕ್ಕೀಡಾಗಿದ್ದ ಶ್ರೀಲಂಕಾ ಇದೀಗ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಗೆದ್ದು ಭರ್ಜರಿ ಕಮ್ ಬ್ಯಾಕ್ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಕೊಲಂಬೋ: ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮುಖಭಂಗಕ್ಕೀಡಾಗಿದ್ದ ಶ್ರೀಲಂಕಾ ಇದೀಗ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಗೆದ್ದು ಭರ್ಜರಿ ಕಮ್ ಬ್ಯಾಕ್ ಮಾಡಿದೆ. 
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಲಂಕಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಬಾಂಗ್ಲಾದೇಶ ವಿರುದ್ಧ ಕ್ಲೀನ್ ಸ್ವಿಪ್ ಮಾಡಿದೆ. ಕೊಲಂಬೋದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಲಂಕಾ 122 ರನ್ ಗಳಿಂದ ಜಯ ಗಳಿಸಿತು. 
ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ಮೊದಲ ಸರಣಿ ಗೆದ್ದ ಲಂಕಾ ಆಟಗಾರರು ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಈ ವೇಳೆ ಆಟಗಾರ ಕುಸಲ್ ಮೆಂಡಿಸ್ ಮೈದಾನದಲ್ಲೇ ಬೈಕ್ ಓಡಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. 
ಸಹ ಆಟಗಾರನನ್ನು ಹಿಂದೆ ಕೂರಿಸಿಕೊಂಡು ಮೈದಾನದಲ್ಲಿ ಮೆಂಡಿಸ್ ವೇಗವಾಗಿ ಬೈಕ್ ಓಡಿಸುತ್ತಿದ್ದು ಈ ವೇಳೆ ಆಯಾ ತಪ್ಪಿ ಬೈಕ್ ಕೆಳಗೆ ಬಿದ್ದಿದೆ. ಬೈಕ್ ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಭದ್ರತಾ ಸಿಬ್ಬಂದಿ ಓಡಿ ಬಂದು ಅವರನ್ನು ಮೇಲಕ್ಕೆ ಎತ್ತಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com