ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ವಿಶ್ವಕಪ್ ವೇಳೆ ಗಾಯಗೊಂಡಿರುವ ಶಿಖರ್ ಧವನ್ ತಂಡವನ್ನು ಸೇರಿಕೊಂಡಿದ್ದಾರೆ. ಈ ನಡುವೆ ಅಚ್ಚರಿಯೆಂಬಂತೆ ಕೆಎಲ್ ರಾಹುಲ್ ಅವರನ್ನು ಕೈಬಿಡಲಾಗಿದೆ.
ಈ ಪಂದ್ಯದ ಮೂಲಕ ನವದೀಪ್ ಸೈನಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡುತ್ತಿದ್ದರೆ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಹನ್ನೊಂದರಲ್ಲಿ ಸ್ಥಾನ ಪಡೆದಿಲ್ಲ. ಚಹರ್ ಸಹೋದರರಾದ ರಾಹುಲ್ ಮತ್ತು ದೀಪಕ್ ಕೂಡ ತಂಡದಲ್ಲಿಲ್ಲ.
ಇನ್ನು ವೆಸ್ಟ್ ಇಂಡೀಸ್ ಜೇಸನ್ ಮೊಹಮ್ಮದ್, ಖಾರಿ ಪಿಯರ್ ಮತ್ತು ಆಂಥೋನಿ ಬ್ರಾಂಬಲ್ ಅವರನ್ನು ಕೈಬಿಟ್ಟಿದೆ.