ಸೈಯದ್ ಮುಷ್ತಾಕ್ ಅಲಿ ಟಿ 20: ಹಾಲಿ ಚಾಂಪಿಯನ್ ಕರ್ನಾಟಕಕ್ಕೆ 1ರನ್ ರೋಚಕ ಜಯ!

ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಎದುರಾಳಿ ತಮಿಳುನಾಡಿನ ವಿರುದ್ಧ ಹಾಲಿ ಚಾಂಪಿಯನ್ ಕರ್ನಾಟಕ ಒಂದು ರನ್ ಅಂತರದ ರೋಚಕ ಜಯ ದಾಖಲಿಸಿದೆ. 
ಸೈಯದ್ ಮುಷ್ತಾಕ್ ಅಲಿ ಟಿ 20: ಹಾಲಿ ಚಾಂಪಿಯನ್ ಕರ್ನಾಟಕಕ್ಕೆ 1ರನ್ ರೋಚಕ ಜಯ!
ಸೈಯದ್ ಮುಷ್ತಾಕ್ ಅಲಿ ಟಿ 20: ಹಾಲಿ ಚಾಂಪಿಯನ್ ಕರ್ನಾಟಕಕ್ಕೆ 1ರನ್ ರೋಚಕ ಜಯ!
Updated on

ಸೂರತ್: ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಎದುರಾಳಿ ತಮಿಳುನಾಡಿನ ವಿರುದ್ಧ ಹಾಲಿ ಚಾಂಪಿಯನ್ ಕರ್ನಾಟಕ ಒಂದು ರನ್ ಅಂತರದ ರೋಚಕ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಕರ್ನಾಟಕ ತಂಡ ಮನೀಷ್ ಪಾಂಡೆ ಅರ್ಧ ಶತಕದ ಸಹಾಯದಿಂದ ನಿಗದಿತ 20 ಓವರ್ ಗಳಿಗೆ ಐದು ವಿಕೆಟ್ ನಷ್ಟಕ್ಕೆ 180 ರನ್ ದಾಖಲಿಸಿತು. ಆ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ತಮಿಳುನಾಡು ಬಾಬಾ ಅಪರಾಜಿತ್ (40), ವಿಜಯ ಶಂಕರ್(44) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ನಿಗದಿತ ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಮೂಲಕ ಕರ್ನಾಟಕಕ್ಕೆ ಒಂದು ರನ್ ಜಯ ಲಭಿಸುಇದ್ದು ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ತಮಿಳುನಾಡಿನ ಪರ ನಾಯಕ ದಿನೇಶ್ ಕಾರ್ತಿಕ್ 20, ವಾಷಿಂಗ್ಟನ್ ಸುಂದರ್ 24, ಶಾರುಖ್ ಖಾನ್ 16, ಹರಿ ನಿಶಾಂತ್14, ರವಿಚಂದ್ರನ್ ಅಶ್ವಿನ್ ಅಜೇಯ 16 ರನ್ ಕಲೆ ಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com