ಹೈದರಾಬಾದ್: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ್ ಟಿ 20 ಪಂದ್ಯದಲ್ಲಿ ನಾಯಕ ಅಮೋಘ ಬ್ಯಾಟಿಂಗ್ ನೆರವಿನೊಡನೆ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಪ್ರವಾಸಿ ವಿಂಡೀಸ್ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಗಳಿಸಿದೆ.
ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಶಿಮ್ರಾನ್ ಹೆಟ್ಮೇರ್ (56 ರನ್, 41 ಎಸೆತಗಳು) ಹಾಗೂ ಎವಿನ್ ಲೆವಿಸ್ (40 ರನ್, 17 ಎಸೆತಗಳು) ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಿಗೆ ಐದು ವಿಕೆಟ್ ನಷ್ಟಕ್ಕೆೆ 207 ರನ ಗಳಿಸಿತು. ಆ ಮೂಲಕ ಭಾರತಕ್ಕೆ 208 ರನ್ ಗಳ ಕಠಿಣ ಗುರಿ ನೀಡಿತ್ತು.
ಆದರೆ ಈ ಕಠಿಣ ಗುರಿಯನ್ನೇ ಸವಾಲಾಗಿ ಸ್ವೀಕರಿಸಿದ ಟೀಂ ಇಂಡಿಯಾಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್‌ನಷ್ಟದಲ್ಲಿ 209 ರನ್ ಗಳಿಸಿ ಅಮೋಘ ಜಯ ತನ್ನದಾಗಿಸಿಕೊಂಡಿದೆ.
ಟೀಂ ಇಂಡಿಯಾದ ಆರಂಭಿಕ ಆಟಗಾರ ಹಿಟ್‌ಮ್ಯಾನ್ ರೋಹಿತ್ ಶರ್ಮಾ (8) ನಿರಾಶೆ ಮೂಡಿಸಿದ್ದರೂ ಕರ್ನಾಟಕದ ಕೆ.ಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ರಾಹುಲ್ 40 ಎಸೆತಗಳಲ್ಲಿ 5 ಫೋರ್ ಮತ್ತು 4 ಸಿಕ್ಸರ್‌ಗಳೊಂದಿಗೆ 62 ರನ್‌ಗಳಿಸಿದ್ದರು.
ರಾಹುಲ್ ನಿರ್ಗಮನದ ಬಳಿಕ ಕ್ರೀಸ್ ಗಿಳಿದ ನಾಯಕ ವಿರಾಟ್ ಕೊಹ್ಲಿ ಕೇವಲ 50 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿ ಅತ್ಯದ್ಭುತ ಪ್ರದರ್ಶನ ನೀಡಿದರು. ಅಲ್ಲದೆ ತಲಾ 6 ಫೋರ್ ಮತ್ತು ಸಿಕ್ಸರ್‌ಗಳು ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿದರು.ಕೊಹ್ಲಿ ಈ ಅಮೋಘ ಪ್ರದರ್ಶನದೊಡನೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಸ್ಕೋರ್ ದಾಖಲಿಸಿದರೆ ಭಾರತ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿ ಜಯಗಳಿಸಿರುವುದು ಸಹ ಇದು ಮೊದಲ ಬಾರಿಯಾಗಿದೆ. ಈ ಮುನ್ನ 2007ರಲ್ಲಿ ಶ್ರೀಲಂಕಾ ವಿರುದ್ಧ 207 ರನ್‌ಗಳ ಗುರಿ ಬೆನ್ನತ್ತಿ ಜಯಿಸಿದ್ದು ಅತ್ಯಂತ ದೊಡ್ಡ ಮೊತ್ತದ ಸಾಧನೆ ಎನಿಸಿತ್ತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 207 (ಎವಿನ್ ಲೂಯಿಸ್ 40, ಬ್ರ್ಯಾಂಡನ್ ಕಿಂಗ್ 31, ಶಿಮ್ರಾನ್ ಹೆಟ್ಮಾಯೆರ್ 56, ಕೈರೊನ್ ಪೊಲಾರ್ಡ್ 37, ಜೇಸನ್ ಹೋಲ್ಡರ್ ಔಟಾಗದೆ 24; ಯುಜ್ವೇಂದ್ರ ಚಹಲ್ 36ಕ್ಕೆ 2, ರವೀಂದ್ರ ಜಡೇಜಾ 30ಕ್ಕೆ 1, ವಾಷಿಂಗ್ಟನ್ ಸುಂದರ್ 34ಕ್ಕೆ 1, ದೀಪಕ್ ಚಹರ್ 56ಕ್ಕೆ 1).
ಭಾರತ: 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 209 (ಕೆಎಲ್ ರಾಹುಲ್ 62, ವಿರಾಟ್ ಕೊಹ್ಲಿ ಅಜೇಯ 94, ರಿಷಭ್ ಪಂತ್ 18; ಖಾರಿ ಪಿಯರ್ 44ಕ್ಕೆ 2).
Advertisement