ರಿಷಭ್ ಪಂತ್ - ಎಂಎಸ್ ಧೋನಿ
ರಿಷಭ್ ಪಂತ್ - ಎಂಎಸ್ ಧೋನಿ

ಧೋನಿ ರೀತಿ ಆಗಲು ರಿಷಭ್ ಪಂತ್ ಗೆ 15 ವರ್ಷ ಬೇಕು: ಸೌರವ್ ಗಂಗೂಲಿ

ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಭ್ ಪಂತರ್ ಅವರು ಧೋನಿ-ಧೋನಿ ಎಂದು ಕೂಗುವುದನ್ನು ಕೇಳಿಸಿಕೊಂಡು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಹೇಳಿದ್ದಾರೆ.

ನವದೆಹಲಿ: ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಭ್ ಪಂತರ್ ಅವರು ಧೋನಿ-ಧೋನಿ ಎಂದು ಕೂಗುವುದನ್ನು ಕೇಳಿಸಿಕೊಂಡು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೌರವ್ ಗಂಗೂಲಿ, “ಧೋನಿ-ಧೋನಿ ಎಂಬ ಕೂಗನ್ನು ಕೇಳಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಅಲ್ಲದೆ ಪಂತ್ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳಬೇಕಿದೆ. ಒತ್ತಡದಿಂದ ಹೊರ ಬರಲು ಮಾರ್ಗವನ್ನು ಕಂಡುಕೊಳ್ಳಬೇಕು. ಪಂತ್ ಅವರಿಗೆ ಹಿರಿಯ ಕ್ರಿಕೆಟಿಗ ಎಂಎಸ್ ಧೋನಿ ಅವರಂತಾಗಲು 15 ವರ್ಷ ಬೇಕಾಗುತ್ತದೆ. ಪ್ರತಿ ದಿನ ನಿಮಗೆ ಎಂಎಸ್ ಧೋನಿ ಸಿಗಲಾರರು. ಮಾಹಿ ಮಾಡಿದ ಸಾಧನೆ ಮಾಡಲು ಪಂತ್ ಅವರಿಗೆ 15 ವರ್ಷ ಬೇಕು” ಎಂದಿದ್ದಾರೆ.

ರಿಷಭ್ ಪಂತ್‌ ತಮ್ಮ ವಿರುದ್ಧದ ಟೀಕೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಆಡಬೇಕು ಎಂದು ದಾದಾ ಸಲಹೆ ನೀಡಿದ್ದಾರೆ.

ಇನ್ನು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಸಹ ಪಂತ್‌ ಪರವಾಗಿ ಬ್ಯಾಟಿಂಗ್ ಮಾಡಿದ್ದು, ಯುವ ಆಟಗಾರನಿಗೆ ತಮ್ಮ ನೈಜ ಸಾಮರ್ಥ್ಯ ಕಂಡುಕೊಳ್ಳಲು ಸಮಯದ ಅಗತ್ಯವಿದೆ ಎಂದು ಹೇಳಿದ್ದಾರೆ. 

ಸಾಲು ಸಾಲು ವೈಫಲ್ಯಗಳಿಂದಾಗಿ ಟೀಕಾಕಾರ ಕೆಂಗಣ್ಣಿಗೆ ಗುರಿಯಾಗಿರುವ ಪಂತ್,  ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೇ ಹೋದಲ್ಲಿ ತಂಡದಿಂದ ಹೊರ ಬೀಳುವ ಅಪಾಯದಲ್ಲಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com