ರವೀಂದ್ರ ಜಡೇಜಾ ರನೌಟ್‌ ವಿವಾದಿತ ನಿರ್ಧಾರ: ಇಂಥ ಘಟನೆ ಹಿಂದೆಂದೂ ಸಂಭವಿಸಿಲ್ಲವೆಂದ ಕೊಹ್ಲಿ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆನ್‌ ಫೀಲ್ಡ್ ಅಂಪೈರ್‌ ತಡವಾಗಿ ನೀಡಿದ  ರವೀಂದ್ರ ಜಡೇಜಾ ಅವರ ರನೌಟ್‌ ನಿರ್ಧಾರದ ಘಟನೆ ಈ ಹಿಂದೆ ಎಂದೂ ನಡೆದಿರುವ ನಿದರ್ಶನವಿಲ್ಲ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದರು.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಚೆನ್ನೈ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆನ್‌ ಫೀಲ್ಡ್ ಅಂಪೈರ್‌ ತಡವಾಗಿ ನೀಡಿದ  ರವೀಂದ್ರ ಜಡೇಜಾ ಅವರ ರನೌಟ್‌ ನಿರ್ಧಾರದ ಘಟನೆ ಈ ಹಿಂದೆ ಎಂದೂ ನಡೆದಿರುವ ನಿದರ್ಶನವಿಲ್ಲ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದರು.

"ರವೀಂದ್ರ ಜಡೇಜಾ ಔಟ್ ಆಗದಿದ್ದಲ್ಲಿ ನಾವು ಇನ್ನೂ 15 ರಿಂದ 20 ರನ್ ಗಳಿಸುತ್ತಿದ್ದೆವು. ಫೀಲ್ಡಿರ್‌ ಔಟ್‌ಗಾಗಿ ಮನವಿ ಸಲ್ಲಿಸಿದಾಗ ಅಂಪೈರ್‌ ನಾಟೌಟ್‌ ನೀಡಿದ್ದರು.  ಮೂಲಕ ಆ ನಿರ್ಧಾರ ಅಲ್ಲಿಗೆ ಮುಗಿದಿತ್ತು. ಅಂಗಳದಿಂದ ಹೊರಗೆ ಕುಳಿತಿರುವವರು ಆನ್ ಫೀಲ್ಡ್ ಅಂಪೈರ್‌ ಬಳಿ ರಿವ್ಯೂವ್ ಕೇಳುವ ಆಗಿಲ್ಲ," ಎಂದು ಕೊಹ್ಲಿ ಪಂದ್ಯದ ಬಳಿಕ ತೀರ್ಪುಗಾರರ ಮೇಲೆ ಗರಂ ಆದರು.

"ಇಂತಹ ಘಟನೆಯನ್ನು ಕ್ರಿಕೆಟ್‌ ನಲ್ಲಿ ಈ ಹಿಂದೆ ಎಂದೂ ನಾನು ಕಂಡಿಲ್ಲ. ನಿಯಮಗಳು ಎಲ್ಲಿವೆ ಎಂದ ನನಗೆ ಗೊತ್ತಿಲ್ಲ. ರೆಫರಿ ಹಾಗೂ ಅಂಪೈರ್‌ ಚರ್ಚಿಸಿ ನಿರ್ಧಾರ ಪ್ರಕಟಿಸಲಿ. ಆದರೆ, ಮೈದಾನದ ಹೊರಗೆ ಕುಳಿತುಕೊಳ್ಳುವ ಜನರು ಮೈದಾನದಲ್ಲಿ ಏನಾಗುತ್ತದೆ ಎಂದು ನಿರ್ದೇಶಿಸಬಾರದು ಮತ್ತು ಅದು ಅಲ್ಲಿ ಏನಾಯಿತು ಎಂದು ನಿಖರವಾಗಿ ಹೇಳಬಾರದು "ಎಂದು ಅವರು ಹೇಳಿದರು.

ಇನಿಂಗ್ಸ್‌ನ 48ನೇ ಓವರ್‌ನಲ್ಲಿ ನಡೆದ ಘಟನೆ ಇದು. ಚುರುಕಿನ ಸಿಂಗಲ್‌ ರನ್‌ ಕದಿಯಲು  ಯತ್ನಿಸಿದ ಜಡೇಜಾ ಅವರನ್ನು ವೆಸ್ಟ್‌ ಇಂಡೀಸ್‌ನ ಫೀಲ್ಡರ್‌ ರೋಸ್ಟನ್‌ ಚೇಸ್‌ ನೇರವಾಗಿ ವಿಕೆಟ್‌ಗೆ ಚೆಂಡನ್ನು ಹಿಟ್‌ ಮಾಡುವ ಮೂಲಕ ಔಟ್‌ಗಾಗಿ ಮನವಿ ಮಾಡಿದರು. ಜಡೇಜಾ ಕ್ರೀಸ್‌ ತಲುಪದೇ ಇದ್ದರೂ ಆನ್‌ಫೀಲ್ಡ್‌ ಅಂಪೈರ್‌ ದಕ್ಷಿಣ ಆಫ್ರಿಕಾ ಮೂಲದ ಶಾನ್‌ ಜಾರ್ಜ್‌ ನಾಟ್‌ ಔಟ್‌ ನಿರ್ಧಾರ ನೀಡಿದ್ದರು. ಈ ಸಂದರ್ಭದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಇನ್ನೇನು ಡಿಆರ್‌ಎಸ್‌ ಮನವಿ ಸಲ್ಲಿ  ಸಲ್ಲೂ ಇಲ್ಲ. ನಿರ್ಧಾರ ಪ್ರಕಟವಾಗಿ ಬಾಲ್‌ ಡೆಡ್‌ ಆಗಿದ್ದ ಸಂದರ್ಭದಲ್ಲಿ ವಿಂಡೀಸ್‌ ಆಟಗಾರರ ನಿರಂತರ ಮನವಿ ಮೇರೆಗೆ ಟೆಲಿವಿಷನ್‌ ರೀಪ್ಲೇ ಕಂಡು ತಮ್ಮ ತಪ್ಪಿನ ಅರಿವಾದ ಬಳಿಕ ಅಂಪೈರ್‌ ಥರ್ಡ್‌ ಅಂಪೈರ್‌ ಮೊರೆ ಹೋದರು.

ಈ ಸಂದರ್ಭದಲ್ಲಿ ಅಂಪೈರ್‌ಗಳ ಈ ಎಡವಟ್ಟು ಕಂಡು ಕೆಂಡಾಮಂಡಲಗೊಂಡ  ನಾಯಕ ಕೊಹ್ಲಿ ಬೌಂಡರಿ ಗೆರೆ ಬಳಿಬಂದು ತಮ್ಮ ಕೋಪ ತಾಪಗಳನ್ನು ಹೊರಹಾಕಿದರು. ಆದರೆ, ಕೊಹ್ಲಿ ಫೀಲ್ಡ್‌ ಒಳಗೆ ಪ್ರವೇಶಿಸಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರ ಭಾರಿ ಚರ್ಚೆಯಾಗಿ ಚೆಂಡು ಡೆಡ್‌ ಆದ ಬಳಿಕ 3ನೇ ಅಂಪೈರ್‌ ನಿರ್ಧಾರ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕೊಹ್ಲಿ ಕೋಪಕ್ಕೂ ಇದೇ ಕಾರಣವಾಗಿತ್ತು.

ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ಭಾರತ ತಂಡಕ್ಕೆ ಆಸರೆಯಾಗಿದ್ದ ಜಡೇಜಾ 21 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಅವರೊಟ್ಟಿಗೆ ಚುರುಕಿನ ಆಟವಾಡಿದ ಕೇದಾರ್‌ ಜಾಧವ್‌ 35 ಎಸೆತಗಳಲ್ಲಿ 40 ರನ್‌ ಗಳಿಸಿ ತಂಡಕ್ಕೆ ಸವಾಲಿನ ಮೊತ್ತ ತಂದುಕೊಟ್ಟರು. 25ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡ ಅಂತಿಮವಾಗಿ 50 ಓವರ್‌ಗಳಲ್ಲಿ 287/8 ರನ್‌ಗಳನ್ನು ಗಳಿಸಿತ್ತು. ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್‌, ಶಿಮ್ರಾನ್‌ ಹೆಟ್ಮೇರ್ (139) ಹಾಗೂ ರೋಸ್ಟನ್‌ ಚೇಸ್ (102*) ಅವರ ಶತಕಗಳ ನೆರವಿನಿಂದ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಪ್ರವಾಸಿಗರು ಗೆಲುವಿನ ಸಂಭ್ರಮ ಆಚರಿಸಿದರು.

ವೆಸ್ಟ್‌ ಇಂಡೀಸ್ ತಂಡದ 139 ರನ್‌ ಸಿಡಿಸಿದ ಶಿಮ್ರಾನ್ ಹೆಟ್ಮೇರ್‌ ಅವರನ್ನು ಕೊಹ್ಲಿ ಶ್ಲಾಘಿಸಿದ್ದಾರೆ. "ನಮ್ಮಲ್ಲಿ ಆರು ಮಂದಿ ಬೌಲರ್‌ ಗಳಿದ್ದರು. ಎದುರಾಳಿಯನ್ನು ನಿಯಂತ್ರಿಸಲು ನಮಗೆ ಆರು ಮಂದಿ ಸಾಕಾಗಿತ್ತು. ಆದರೆ, ಪಿಚ್‌ನ ಬದಲಾವಣೆ ತೀವ್ರವಾಗಿತ್ತು ಎಂಬ ನನಗೆ ಅನಿಸಲಿಲ್ಲ. ವಿಂಡೀಸ್‌ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿತ್ತು. ಆದರೆ, ಸ್ಪಿನ್ನರ್ ಗಳು ಹೇರಿದ್ದ ಒತ್ತಡ ನಮಗೆ ಸಾಕಾಗಲಿಲ್ಲ. ಶೀಮ್ರಾನ್ ಹೆಟ್ಮೇರ್‌ ಅದ್ಭುತ ಬ್ಯಾಟಿಂಗ್ ಮಾಡಿದ್ದರು," ಎಂದು ಕೊಹ್ಲಿ ತಿಳಿಸಿದರು.

"ರೋಹಿತ್‌ ಶರ್ಮಾ ಹಾಗೂ ನಾನು ಬ್ಯಾಟಿಂಗ್‌ ನಲ್ಲಿ ವಿಫಲರಾದೆವು. ಇದು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ಸಿಕ್ಕಿತು. ಅದರಂತೆ, ರಿಷಭ್‌ ಪಂತ್‌ ಹಾಗೂ ಶ್ರೇಯಸ್‌ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು," ಎಂದು ಕೊಹ್ಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com