ಹ್ಯಾಟ್ರಿಕ್ ವಿಕೆಟ್ ಪಡೆದ ಖುಷಿಯಲ್ಲಿ ತಾಹಿರ್ ರೀತಿ ಮೈದಾನದಲ್ಲೆಲ್ಲಾ ಓಡಾಡಿದ ಕುಲ್‍ದೀಪ್, ವಿಡಿಯೋ ವೈರಲ್!

ಯಾವುದೇ ಬೌಲರ್ ಗೆ ಹ್ಯಾಟ್ರಿಕ್ ವಿಡಿಯೋ ಪಡೆಯುವುದು ದೊಡ್ಡ ಸಾಧನೆ. ಇನ್ನು ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಬೌಲರ್ ಕುಲ್‍ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಕುಲದೀಪ್ ಯಾದವ್-ಇಮ್ರಾನ್ ತಾಹಿರ್
ಕುಲದೀಪ್ ಯಾದವ್-ಇಮ್ರಾನ್ ತಾಹಿರ್

ವಿಶಾಖಪಟ್ಟಣಂ: ಯಾವುದೇ ಬೌಲರ್ ಗೆ ಹ್ಯಾಟ್ರಿಕ್ ವಿಡಿಯೋ ಪಡೆಯುವುದು ದೊಡ್ಡ ಸಾಧನೆ. ಇನ್ನು ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಬೌಲರ್ ಕುಲ್‍ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ 33ನೇ ಓವರ್ ನಲ್ಲಿ ಕುಲ್‍ದೀಪ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ವಿಂಡೀಸ್ ಬ್ಯಾಟ್ಸ್ ಮನ್ ಗಳಾದ ಹೋಪ್, ಕೀರನ್ ಪೊಲಾರ್ಡ್ ಮತ್ತು ಪೌಲ್ ಮೂವರನ್ನು ಔಟ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದರ ಜೊತೆಗೆ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಹ್ಯಾಟ್ರಿಕ್ ವಿಕೆಟ್ ಪಡೆದ ಸಂಭ್ರಮದಲ್ಲಿ ಕುಲ್‍ದೀಪ್ ದಕ್ಷಿಣ ಆಫ್ರಿಕಾ ಬೌಲರ್ ಇಮ್ರಾನ್ ತಾಹಿರ್ ರೀತಿ ಮೈದಾನದಲ್ಲೆಲ್ಲ ಓಡಾಡಿ ಖುಷಿ ವ್ಯಕ್ತಪಡಿಸಿದ್ದು ಈ ವಿಡಿಯೋ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com