ಸಂಗ್ರಹ ಚಿತ್ರ
ಕ್ರಿಕೆಟ್
ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಸೋಲಿನ ಕಳಂಕವನ್ನು ಕಳಚುತ್ತೇವೆ: ಮೋಯಿನ್ ಖಾನ್
ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತಿರುವ ಇತಿಹಾಸವೇ ಇಲ್ಲ. ಆದರೆ ಮುಂಬರುವ ವಿಶ್ವಕಪ್ ನಲ್ಲಿ ಈ ಸೋಲಿನ...
ಕರಾಚಿ: ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತಿರುವ ಇತಿಹಾಸವೇ ಇಲ್ಲ. ಆದರೆ ಮುಂಬರುವ ವಿಶ್ವಕಪ್ ನಲ್ಲಿ ಈ ಸೋಲಿನ ಕಳಂಕವನ್ನು ಕಳಚುತ್ತೇವೆ ಎಂದು ಪಾಕಿಸ್ತಾನ ಮಾಜಿ ನಾಯಕ ಮೋಯಿನ್ ಖಾನ್ ಹೇಳಿದ್ದಾರೆ.
2019ರ ಐಸಿಸಿ ವಿಶ್ವಕಪ್ ಗೆ ಇನ್ನು ಕೆಲ ತಿಂಗಳುಗಳು ಬಾಕಿ ಇದ್ದು ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಪಾಕಿಸ್ತಾನ ಮಣಿಸಲಿದೆ ಎಂದು ಮೋಯಿನ್ ಖಾನ್ ಹೇಳಿದ್ದಾರೆ.
ಈ ಹಿಂದೆ ಆರು ಬಾರಿ ಏಕದಿನ ವಿಶ್ವಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಈ ಸೋಲಿನ ಕಳಂಕವನ್ನು ಕಳಚುತ್ತೇವೆ. ಈಗಿನ ಪಾಕ್ ತಂಡ ಅತೀವ ಪ್ರತಿಭೆಯನ್ನು ಹೊಂದಿದ್ದು ಭಾರತ ವಿರುದ್ಧ ಗೆಲ್ಲುವ ಸಾಮರ್ಥ್ಯವನ್ನು ಪಡೆದಿದೆ. ನಾಯಕ ಸರ್ಫರಾಜ್ ಅಹ್ಮದ್ ತಂಡವನ್ನು ಉತ್ತಮವಾಗಿ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ