ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಮಾಡಿ 288 ರನ್ ಗಳನ್ನು ಪೇರಿಸಿದೆ. 289 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿದ್ದು ಶಿಖರ್ ಧವನ್ ಮೊದಲ ಎಸೆತದಲ್ಲಿ ಔಟ್ ಆಗಿ ಗೋಲ್ಡನ್ ಡಕೌಟ್ ಆದರು. ಬಳಿಕ ಬಂದ ಅಂಬಟ್ಟಿ ರಾಯುಡು ಎರಡನೇ ಎಸೆತದಲ್ಲಿ ಡಕೌಟ್ ಆಗಿ ಪೆವಿಲಿಯನ್ ಸೇರಿದರು.