ಪಾಂಡ್ಯ, ರಾಹುಲ್ ಅಶ್ಲೀಲ ಹೇಳಿಕೆ ಬೆನ್ನಲ್ಲೇ ವಿರಾಟ್ ಹಳೆಯ ವಿಡಿಯೋ ವೈರಲ್: ಹಳೆಯದನ್ನು ಕೆದಕಿ ಟ್ವೀಟಿಗರು!
ಮಹಿಳೆಯರ ಬಗ್ಗೆ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಅಶ್ಲೀಲ ಹೇಳಿಕೆ ಬೆನ್ನಲ್ಲೇ ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿಯ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಟ್ವೀಟಿಗರು ಕೊಹ್ಲಿಯನ್ನು ಟ್ರೋಲ್
ಪಾಂಡ್ಯ, ರಾಹುಲ್ ಅಶ್ಲೀಲ ಹೇಳಿಕೆ ಬೆನ್ನಲ್ಲೇ ವಿರಾಟ್ ಹಳೆಯ ವಿಡಿಯೋ ವೈರಲ್: ಹಳೆಯದನ್ನು ಕೆದಕಿದ ಟ್ವೀಟಿಗರಿಂದ ಭಾರಿ ಟ್ರೋಲ್
ಮಹಿಳೆಯರ ಬಗ್ಗೆ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಅಶ್ಲೀಲ ಹೇಳಿಕೆ ಬೆನ್ನಲ್ಲೇ ಟೀಂ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿಯ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಟ್ವೀಟಿಗರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಇಬ್ಬರೂ ಮಹಿಳೆಯರ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ಬಿಸಿಸಿಐ ನಿಂದ ಮುಂದಿನ ಎರಡು ಸರಣಿಗಳಿಗೆ ಅಮಾನತುಗೊಂಡಿದ್ದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಿಂದೊಮ್ಮೆ ಯುವತಿಯ ಬಗ್ಗೆ ನೀಡಿದ್ದ ಲಘು ಹೇಳಿಕೆ ಈಗ ವೈರಲ್ ಆಗತೊಡಗಿದೆ.
ಆಂಕರ್ ಅನುಶಾ ದಂಡೇಕರ್ ನೀವು ಅತಿ ತ್ವರಿತವಾಗಿ ನಡೆದ ಡೇಟಿಂಗ್ ಯಾವುದು ಎಂದು ಕೇಳಿದ ಪ್ರಶ್ನೆಗೆ "ಬ್ಲೈಂಡ್ ಡೇಟಿಂಗ್ ಗೆ ಹೋಗಿದ್ದಾಗ 5 ನಿಮಿಷದಲ್ಲಿ ಮುಗಿದುಹೋಯಿತು, ಆಕೆಯನ್ನು ನೋಡಿದ ತಕ್ಷಣವೇ ನಾನು ಓಡಿ ಹೋದೆ". ಏಕೆಂದು ಕೇಳಿದಾಗ ಆಕೆ ಅಷ್ಟು ಕೆಟ್ಟದಾಗಿದ್ದಳು ಎಂದು ವಿರಾಟ್ ಕೊಹ್ಲಿ ಹೇಳಿದ್ದರು.
ಈ ವಿಡಿಯೋವನ್ನು ಆಸ್ಟ್ರೇಲಿಯಾದ ಪತ್ರಕರ್ತರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.