ಚೀನಾ ಬಳಿಕ ವಿಶ್ವದಲ್ಲೇ ಅತಿ ಕಡಿಮೆ ರನ್‌ಗೆ ಆಲೌಟ್ ಆದ ಭಾರತದ ದೇಸಿ ತಂಡ, 7 ಡಕೌಟ್!

ಕ್ರಿಕೆಟ್ ಶಿಶು ಎಂದು ಕರೆಸಿಕೊಳ್ಳಲು ಚೀನಾ ಟಿ20 ಪಂದ್ಯದಲ್ಲಿ ಅತೀ ಕಡಿಮೆ ರನ್‌ಗೆ ಔಟಾಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಕಳಪೆ ದಾಖಲೆಯನ್ನು ಸೃಷ್ಟಿಸಿತ್ತು. ಆದರೆ ಬಲಿಷ್ಠ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕ್ರಿಕೆಟ್ ಶಿಶು ಎಂದು ಕರೆಸಿಕೊಳ್ಳಲು ಚೀನಾ ಟಿ20 ಪಂದ್ಯದಲ್ಲಿ ಅತೀ ಕಡಿಮೆ ರನ್‌ಗೆ ಔಟಾಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಕಳಪೆ ದಾಖಲೆಯನ್ನು ಸೃಷ್ಟಿಸಿತ್ತು. ಆದರೆ ಬಲಿಷ್ಠ ಕ್ರಿಕೆಟ್ ಅಡಿಪಾಯ ಹೊಂದಿರುವ ಭಾರತದಲ್ಲೂ ಇದೇ ರೀತಿ ಅತ್ಯಲ್ಪ ಮೊತ್ತಕ್ಕೆ ತಂಡ ಆಲೌಟ್ ಆಗಿರುವುದು ದುರಂತ. 
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಮಹಿಳಾ ಲೀಗ್ ಮತ್ತು ನಾಕೌಟ್ ಅಂಡರ್ 23 ಟಿ20 ಪಂದ್ಯಾವಳಿಯಲ್ಲಿಅರುಣಾಚಲ ಪ್ರದೇಶ ತಂಡ 14 ರನ್ ಗಳಿಗೆ ಆಲೌಟ್ ಆಗಿದೆ. ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅರುಣಾಚಲ ಪ್ರದೇಶ 11 ಓವರ್ ಗಳಲ್ಲಿ 14 ರನ್ ಗಳಿಗೆ ಸರ್ವಪತನ ಕಂಡಿದೆ. 
ತಂಡದ 7 ಆಟಗಾರ್ತಿಯರು ಶೂನ್ಯಕ್ಕೆ ಔಟಾದರು. ಇನ್ನು 15 ರನ್ ಗಳ ಗುರಿ ಬೆನ್ನಟ್ಟಿದ ಹಿಮಾಚಲ ಪ್ರದೇಶ 1.2 ಓವರ್ ಗಳಲ್ಲಿ ಜಯದ ನಗೆ ಬೀರಿತು. ಇದು ಭಾರತೀಯ ಕ್ರಿಕೆಟ್ ನಲ್ಲಿ ದಾಖಲಾದ ಅತ್ಯಲ್ಪ ಮೊತ್ತ ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ. 
ಇನ್ನು ಸೋಮವಾರವಷ್ಟೇ ಚೀನಾ ಮಹಿಳಾ ತಂಡ ಸಹ ಟಿ20 ಪಂದ್ಯದಲ್ಲಿ 14 ರನ್ ಗಳಿಗೆ ಆಲೌಟ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com