ಭರ್ಜರಿ ಸಿಕ್ಸರ್ ನಿಂದ ಪೆಟ್ಟು ತಿಂದ ಅಭಿಮಾನಿಗೆ ಆಟೋಗ್ರಾಫ್ ವುಳ್ಳ ಹ್ಯಾಟ್ ನೀಡಿದ ರೋಹಿತ್

ರೋಹಿತ್ ಶರ್ಮಾ ಹೊಡೆದ ಸಿಕ್ಸರ್ ನಿಂದ ಪೆಟ್ಟಾಗಿದ್ದ ಅಭಿಮಾನಿ ಮೀನಾ ಅವರನ್ನು ರೋಹಿತ್ ಶರ್ಮಾ ಭೇಟಿಯಾಗಿ, ಆಟೋಗ್ರಾಫ್ ವುಳ್ಳ ಹ್ಯಾಟ್ ನೀಡಿದ್ದಾರೆ
ರೋಹಿತ್ ಶರ್ಮಾ
ರೋಹಿತ್ ಶರ್ಮಾ
Updated on: 
ಬರ್ಮಿಂಗ್ ಹ್ಯಾಮ್:  ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ 104 ರನ್ ಗಳಿಸಿದ ರೋಹಿತ್ ಶರ್ಮಾ ಐದು ಸಿಕ್ಸರ್ ಬಾರಿಸಿದ್ದರು. ಈ ಪೈಕಿ ಒಂದು ಸಿಕ್ಸರ್  ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಭಾರತೀಯ ಅಭಿಮಾನಿಯೊಬ್ಬರ ಮೇಲೆ ಬಿದಿತ್ತು.ಇದನ್ನು ನೋಡಿದ ರೋಹಿತ್ ಶರ್ಮಾ ಪಂದ್ಯ ಮುಗಿದ ಬಳಿಕ ಆಕೆಯನ್ನು ಭೇಟಿ ಮಾಡಿದ್ದು, ಗಾಯದ ಬಗ್ಗೆ ವಿಚಾರಿಸಿದ್ದಾರೆ.
ರೋಹಿತ್ ಆ ಅಭಿಮಾನಿ ಜೊತೆಗೆ ಮಾತಾಡುತ್ತಿರುವ ರೋಹಿತ್ ಶರ್ಮಾ ಅವರ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ರೋಹಿತ್ ಶರ್ಮಾ ಹೊಡೆದ ಸಿಕ್ಸರ್ ನಿಂದ ಪೆಟ್ಟಾಗಿದ್ದ ಅಭಿಮಾನಿ ಮೀನಾ ಅವರನ್ನು ರೋಹಿತ್ ಶರ್ಮಾ ಭೇಟಿಯಾಗಿ, ಆಟೋಗ್ರಾಫ್ ವುಳ್ಳ ಹ್ಯಾಟ್ ನೀಡಿದ್ದಾರೆ ಎಂದು ಬರೆಯಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ  ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಿಡಿಸಿದ ನಾಲ್ಕನೇ ಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಸವಾಲಿನ ಮೊತ್ತ ಕಲೆ ಹಾಕಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ 286ರನ್ ಗಳಿಸಲಷ್ಟೇ ಶಕ್ತವಾಗಿದ್ದರಿಂದ ಟೀಂ ಇಂಡಿಯಾ 28 ರನ್ ಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. 
ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಪ್ರಾರಂಭದಲ್ಲಿ ಉತ್ತಮ ಅನುಭವವಾಯಿತು. ಪಿಚ್ ಬ್ಯಾಟಿಂಗ್ ಗೆ ಯೋಗ್ಯವಾಗಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಲ್ ಗಳು ಸರಿಯಾಗಿ ಬ್ಯಾಟ್ ಗೆ ಸಿಗುತ್ತಿರಲಿಲ್ಲ. ಎಲ್ಲಾ ಬ್ಯಾಟ್ಸ್ ಮನ್ ಗಳು ಉತ್ತಮ ರೀತಿಯಲ್ಲಿ ಪಂದ್ಯವಾಡಿದ್ದು, ಮುಂದಿನ ಪಂದ್ಯದ ಕಡೆಗೆ ಗಮನ ನೀಡುತ್ತಿರುವುದಾಗಿ ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com