ಪಾಕ್ ಕೈಲಾಗದ್ದಕ್ಕೆ ವಿಶ್ವಕಪ್ ಟೂರ್ನಿ ಗುಣಮಟ್ಟವನ್ನೇ ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್!

ಇಂಗ್ಲೆಂಡ್‌ ಆತಿಥ್ಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ವಿಶ್ವಕಪ್‌ ಟೂರ್ನಿಯಲ್ಲಿನ "ಗುಣಮಟ್ಟದ ಕ್ರಿಕೆಟ್‌" ಕುರಿತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಕ್ತರ್‌ ಅಸಮಾಧಾನ...
ಸರ್ಫರಾಜ್ ಅಹ್ಮದ್-ಶೋಯಬ್ ಅಖ್ತರ್
ಸರ್ಫರಾಜ್ ಅಹ್ಮದ್-ಶೋಯಬ್ ಅಖ್ತರ್
Updated on
ನವದೆಹಲಿ: ಇಂಗ್ಲೆಂಡ್‌ ಆತಿಥ್ಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ವಿಶ್ವಕಪ್‌ ಟೂರ್ನಿಯಲ್ಲಿನ "ಗುಣಮಟ್ಟದ ಕ್ರಿಕೆಟ್‌" ಕುರಿತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಕ್ತರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಆಸ್ಟ್ರೇಲಿಯಾ, ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್‌ ಈಗಾಗಲೇ ಟೂರ್ನಿಯ ಸೆಮಿಫೈನಲ್‌ಗೆ ತಲುಪಿವೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು ನ್ಯೂಜಿಲೆಂಡ್‌ ಕೂಡ ಬಹುತೇಕ ನಾಕೌಟ್‌ ಪ್ರವೇಶ ಮಾಡಿದಂತಾಗಿದೆ. 
ಆದರೆ ಈ ಟೂರ್ನಿಯಿಂದ ಪಾಕಿಸ್ತಾನ ಹೊರಬಿದ್ದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಪ್ರಸ್ತುತ ವಿಶ್ವಕಪ್ ನಲ್ಲಿ ಗುಣಮಟ್ಟದ ಕ್ರಿಕೆಟ್ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com