ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ, 314 ರನ್ ಪೇರಿಸಿತು. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ (100 ರನ್) ಶತಕ ಸಿಡಿಸಿದರೆ, ಬಾಬರ್ ಅಜಂ 96 ರನ್ ಸಿಡಿಸಿ ಶತಕ ವಂಚಿತರಾದರು. ಮಧ್ಯಮ ಕ್ರಮಾಂಕದಲ್ಲಿ ಇಮಾದ್ ವಸೀಂ 43 ರನ್ ಸಿಡಿಸಿ ಪಾಕಿಸ್ತಾನ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು. ಆದರೆ ಕೆಳ ಕ್ರಮಾಂಕದ ಆಟಗಾರರ ಎರಡಂಕಿ ಮೊತ್ತ ದಾಟಲು ವಿಫಲವಾದ್ದರಿಂದ ಪಾಕಿಸ್ತಾನ ದೊಡ್ಡ ಮೊತ್ತ ಕಲೆ ಹಾಕವು ವಿಫಲವಾಯಿತು.