ಮಗ ಬೆನ್ ಸ್ಟೋಕ್ಸ್ ಪ್ರದರ್ಶನದಿಂದ ಖುಷಿಯಾಗಿದೆ, ಆದರೆ ನನ್ನ ಬೆಂಬಲ ನ್ಯೂಜಿಲೆಂಡ್ ಗೆ ಮಾತ್ರ: ಗೆರಾರ್ಡ್ ಸ್ಟೋಕ್ಸ್!

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಾಹಸದಿಂದ ಇಂಗ್ಲೆಂಡ್ ವಿಶ್ವಕಪ್ ಜಯಿಸಿದರೂ, ಬೆನ್ ಸ್ಟೋಕ್ಸ್ ತಂದೆ ಮಾತ್ರ ತಮ್ಮ ಬೆಂಬಲವೇನಿದ್ದರೂ ನ್ಯೂಜಿಲೆಂಡ್ ಗೆ ಮಾತ್ರ ಎನ್ನುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಾಹಸದಿಂದ ಇಂಗ್ಲೆಂಡ್ ವಿಶ್ವಕಪ್ ಜಯಿಸಿದರೂ, ಬೆನ್ ಸ್ಟೋಕ್ಸ್ ತಂದೆ ಮಾತ್ರ ತಮ್ಮ ಬೆಂಬಲವೇನಿದ್ದರೂ ನ್ಯೂಜಿಲೆಂಡ್ ಗೆ ಮಾತ್ರ ಎನ್ನುತ್ತಿದ್ದಾರೆ.
ಹೌದು.. ಬೆನ್ ಸ್ಟೋಕ್ಸ್ ತಂದೆ ಗೆರಾರ್ಡ್ ಸ್ಟೋಕ್ಸ್ ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪಂದ್ಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಗ ಬೆನ್ ಪ್ರದರ್ಶನದಿಂದ ಖುಷಿಯಾಗಿದೆ. ಅಂತೆಯೇ ಪ್ರಶಸ್ತಿ ಗೆದ್ದ ಇಂಗ್ಲೆಂಡ್ ಪ್ರದರ್ಶನ ಕೂಡ ಖುಷಿ ತಂದಿದೆ. ಆದರೆ ನನ್ನ ಬೆಂಬಲ ಮಾತ್ರ ನ್ಯೂಜಿಲೆಂಡ್ ಗೆ ಎಂದು ಗೆರಾರ್ಡ್ ಸ್ಟೋಕ್ಸ್ ಹೇಳಿದ್ದಾರೆ.
ಗೆರಾರ್ಡ್ ಸ್ಟೋಕ್ಸ್ ಮೂಲತಃ ನ್ಯೂಜಿಲೆಂಡ್ ನವರಾಗಿದ್ದು, ರಗ್ಬಿ ಕೋಚ್ ಹುದ್ದೆಗಾಗಿ ಇಂಗ್ಲೆಂಡ್ ಆಗಮಿಸಿದ್ದರು. ಗೆರಾರ್ಡ್ ಕುಟುಂಬ ಇಂಗ್ಲೆಂಡ್ ಗೆ ಬಂದಾಗ ಅವರ ಮಗ ಬೆನ್ ವಯಸ್ಸು ಕೇವಲ 14 ವರ್ಷ. ಆ ಬಳಿಕ ವಿದ್ಯಾಬ್ಯಾಸವನ್ನೂ ಇಂಗ್ಲೆಂಡ್ ನಲ್ಲೇ ಮಾಡಿದ ಬೆನ್ ಕ್ರಿಕೆಟ್ ನತ್ತ ಹೆಚ್ಚು ಒಲವು ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಸ್ಥಳೀಯ ಕ್ರಿಕೆಟ್ ಕ್ಲಬ್ ಗೆ ಸೇರಿಸಲಾಯಿತು. ಆ ಬಳಿಕ ಗೆರಾರ್ಡ್ ಕುಟುಂಬ ಅಲ್ಲಿಯೇ ನೆಲೆಯೂರಿತು. ಬೆನ್ ಸ್ಟೋಕ್ಸ್ ಕೂಡ ಇಂಗ್ಲೆಂಡ್ ಪರವಾಗಿಯೇ ಕ್ರಿಕೆಟ್ ಆಡಲು ಶುರು ಮಾಡಿದರು.
ಇದೀಗ ಐಸಿಸಿ ವಿಶ್ವಕಪ್ ಫೈನಲ್ ಬಳಿಕ ಇದೇ ವಿಚಾರವಾಗಿ ಮಾತನಾಡಿರುವ ಗೆರಾರ್ಡ್ ಸ್ಟೋಕ್ಸ್, ನ್ಯೂಜಿಲೆಂಡ್ ನಲ್ಲಿ ನನ್ನಷ್ಟು ದ್ವೇಷಕ್ಕೆ ಒಳಗಾದ ತಂದೆ ಮತ್ತೊಬ್ಬರಿರಲು ಸಾಧ್ಯವಿಲ್ಲ ಎಂದು ಹೇಳಿ ತಮ್ಮ ತವರು ತಂಡ ವಿಶ್ವಕಪ್ ಜಯಿಸದೇ ಇರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನ್ಯೂಜಿಲೆಂಡ್ ಪ್ರದರ್ಶನವನ್ನು ಶ್ಲಾಘಿಸಿದ ಗೆರಾರ್ಡ್, ವಿಶ್ವಕಪ್ ಜಯಿಸದೇ ಇರಬಹುದು. ಆದರೆ ಅವರೂ ಕೂಡ ಜಯದಲ್ಲಿ ಸಮಾನ ಪಾಲುದಾರರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com