ನನ್ನ ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆ: ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್!

ನನ್ನ ಜೀವನದುದ್ದಕ್ಕೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆ ಕೋರುತ್ತೇನೆ ಎಂದು ಇಂಗ್ಲೆಂಡ್ ತಂಡದ ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ನನ್ನ ಜೀವನದುದ್ದಕ್ಕೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆ ಕೋರುತ್ತೇನೆ ಎಂದು ಇಂಗ್ಲೆಂಡ್ ತಂಡದ ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಇಡೀ ಪಂದ್ಯದ ಗತಿಯನ್ನೇ ಬದಲಿಸಿದ ತಮ್ಮ ರನೌಟ್ ಮಿಸ್ ಕುರಿತಂತೆ ಮಾತನಾಡಿರುವ ಬೆನ್ ಸ್ಟೋಕ್ಸ್, ಅದು ಉದ್ದೇಶಪೂರ್ವಕ ಪ್ರಮಾದವಲ್ಲ. ಆದರೂ ಅದರ ಕುರಿತಂತೆ ತಪ್ಪತಸ್ಥ ಭಾವನೆ ನನ್ನನ್ನು ಕಾಡುತ್ತಿದ್ದು, ನನ್ನ ಜೀವನದದುದ್ದಕ್ಕೂ ನಾನು ಕೇನ್ ವಿಲಿಯಮ್ಸನ್ ರ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
'ತನಗೆ ಅರಿವಿಲ್ಲದಂತೆ ಈ ರೀತಿಯಾಗಿದೆ. ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಆದರೂ ಜೀವನದುದ್ದಕ್ಕೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆ ಕೇಳುತ್ತೇನೆ ಎಂದು ಸ್ಟೋಕ್ಸ್ ಹೇಳಿದ್ದಾರೆ.
ಇನ್ನು ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯ ಹಲವು ರೋಚಕ ತಿರುವು ಪಡೆದಿತ್ತು. ಪಂದ್ಯ ಟೈ ಆದ ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆಗಿತ್ತು. ಬಳಿಕ ಇಂಗ್ಲೆಂಡ್ ತಂಡ ಗಳಿಸಿದ ಬೌಂಡರಿಗಳ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು.
ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಕಠಿಣ ಪ್ರಯತ್ನದ ಜೊತೆ ಅದೃಷ್ಠ ಕೂಡ ಕೈ ಹಿಡಿದಿತ್ತು. ಬೆನ್ ಸ್ಟೋಕ್ಸ್ ಅಂತಿಮ ಓವರ್ ನಲ್ಲಿ 2 ರನ್ ಗಾಗಿ ಪ್ರಯತ್ನಿಸಿದ ವೇಳೆ ರನೌಟ್ ತಪ್ಪಿಸಲು ಡೈವ್ ಮಾಡಿದ್ದರು. ಆದರೆ ಥ್ರೋ ನೇರವಾಗಿ ಸ್ಟೋಕ್ಸ್ ಬ್ಯಾಟ್‌ ಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಹೀಗಾಗಿ 2 + 4 ಒಟ್ಟು 6 ರನ್ ನಿಡಲಾಗಿತ್ತು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ಆ ಒಂದು ಘಟನೆ ನಡೆಯದಗೇ ಹೋಗಿದ್ದಲ್ಲಿ ಖಂಡಿತಾ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿರುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com