ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಕ್ರಿಕೆಟ್ ಲೋಕದ ಸರ್ವಶ್ರೇಷ್ಠ ಫೀಲ್ಡರ್ ಅರ್ಜಿ

ಟೀಂ ಇಂಡಿಯಾದ ಸಹಾಯಕ ಕೋಚ್ ಗಳ ಹುದ್ದೆಗೆ ಬಿಸಿಸಿಐ ಅರ್ಜಿ ಅಹ್ವಾನಿಸಿದ ಬೆನ್ನಲ್ಲೇ ಕ್ರಿಕೆಟ್ ಲೋಕದ ಸರ್ವಶ್ರೇಷ್ಠ ಫೀಲ್ಡರ್ ಮತ್ತು ಲೆಜೆಂಡ್ ಆಟಗಾರರೊಬ್ಬರು ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಟೀಂ ಇಂಡಿಯಾದ ಸಹಾಯಕ ಕೋಚ್ ಗಳ ಹುದ್ದೆಗೆ ಬಿಸಿಸಿಐ ಅರ್ಜಿ ಅಹ್ವಾನಿಸಿದ ಬೆನ್ನಲ್ಲೇ ಕ್ರಿಕೆಟ್ ಲೋಕದ ಸರ್ವಶ್ರೇಷ್ಠ ಫೀಲ್ಡರ್ ಮತ್ತು ಲೆಜೆಂಡ್ ಆಟಗಾರರೊಬ್ಬರು ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಹೌದು.. ವಿಶ್ವ ಕಂಡ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್‌ ಗಳಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಲೆಜೆಂಡ್ ಆಟಗಾರ ಜಾಂಟಿ ರೋಡ್ಸ್‌ ಭಾರತ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರ ರಕ್ಷಣೆ ಮೂಲಕವೂ ಪಂದ್ಯ ಗೆಲ್ಲಬಹುದು ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟ ಮೊತ್ತ ಮೊದಲ ಆಟಗಾರ ರೋಡ್ಸ್‌. ಒಂದು ಕಾಲದಲ್ಲಿ ಫೀಲ್ಡಿಂಗ್‌ ಮಾಡಿದರೆ ರೋಡ್ಸ್‌ ರೀತಿಯಲ್ಲಿ ಮಾಡಬೇಕು ಎಂದೇ ಹೇಳಲಾಗುತ್ತಿತ್ತು ಅಷ್ಟರ ಮಟ್ಟಿಗೆ ಕ್ಷೇತ್ರ ರಕ್ಷಣೆಯ ವಿಚಾರದಲ್ಲಿ ರೋಡ್ಸ್‌ ತಮ್ಮ ಛಾಪನ್ನು ಮೂಡಿಸಿದ್ದರು.  ಇದೀಗ ಇದೇ ಜಾಂಟಿ ರೋಡ್ಸ್ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾಂಟಿ ರೋಡ್ಸ್ ಅವರು, 'ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಾರತ ತಂಡದ ಸಾಧನೆ ಬಗ್ಗೆ ಅಪಾರ ಗೌರವವಿದೆ. ಕೇವಲ ಕ್ಯಾಚ್‌ ಡ್ರಾಪ್‌ ಸರಾಸರಿ ಕಡಿಮೆ ಇರುವ ತಂಡಕ್ಕೆ ಮಾತ್ರವೇ ಟೀಮ್‌ ಇಂಡಿಯಾ ಸೀಮಿತವಾಗಬಾರದು. ಭಾರತ ತಂಡ ವಿಕೆಟ್‌ ಪಡೆಯುವ ಅಲ್ಪ ಅವಕಾಶಗಳನ್ನೂ ಪರಿವರ್ತಿಸುವಂತಹ ತಂಡವಾಗಬೇಕು ಎಂದು ಹೇಳಿದ್ದಾರೆ.
ಕಳೆದೊಂದು ದಶಕದಲ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ತಂಡಕ್ಕೆ ಕಬ್ಬಿಣದ ಕಡಲೆಯಾಗಿದ್ದ ಫೀಲ್ಡಿಂಗ್ ತಲೆನೋವು ಕ್ರಮೇಣ ಕಡಿಮೆಯಾಗಿದೆ. ಸೌರವ್ ಗಂಗೂಲಿ ನಾಯಕತ್ವ ವಹಿಸಿಕೊಂಡ ಬಳಿಕ ಮೊಹಮದ್ ಕೈಫ್, ಯುವರಾಜ್ ಸಿಂಗ್ ರಂತಹ ಅದ್ಭುತ ಫೀಲ್ಡರ್ ಗಳನ್ನು ತಂಡಕ್ಕೆ ಪರಿಚಯಿಸಿದ್ದರು. ಆ ಬಳಿಕ ನಾಯಕತ್ವ ವಹಿಸಿಕೊಂಡ ಧೋನಿ ಕೂಡ ಸುರೇಶ್ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಸ್ವತಃ ತಾವೂ ಕೂಡ ಅದ್ಭುತ ವಿಕೆಟ್ ಕೀಪರ್ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು. 
ಅಲ್ಲದೆ ಭಾರತ ತಂಡದ ಫೀಲ್ಡಿಂಗ್ ಸಾಮರ್ಥ್ಯ ಇತ್ತೀಚೆಗೆ ಅಂತ್ಯಗೊಂಡ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲೂ ಮುಂದುವರೆದಿತ್ತು. ಫೀಲ್ಡಿಂಗ್ ಸೇರಿದಂತೆ ತನ್ನ ಆಲ್ ರೌಂಡ್ ಪ್ರದರ್ಶನದ ಮೂಲಕ ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com