ವಿಶ್ವಕಪ್ ಟೂರ್ನಿಯಲ್ಲೂ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ದಾಖಲೆ!

ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ಐತಿಹಾಸಿಕ ಸಾಧನೆ ಗೈದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ಐತಿಹಾಸಿಕ ಸಾಧನೆ ಗೈದಿದ್ದಾರೆ.
ಹೌದು.. ನಿನ್ನೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಮೂರು ಸಿಕ್ಸರ್ ಸಿಡಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಮೂರು ಸಿಕ್ಸರ್ ಗಳ ನೆರವಿನಿಂದಾಗಿ ಕ್ರಿಸ್ ಗೇಯ್ಲ್ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಸಿಕ್ಸರ್ ಗಳ ಗಳಿಕೆಯನ್ನು 40ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಹೊಡೆದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅಲ್ಲದೆ ಈ ವರೆಗೂ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್‌ ದಾಖಲೆಯನ್ನು ಮುರಿದರು. ಡಿವಿಲಿಯರ್ಸ್‌  ಒಟ್ಟು 37 ಸಿಕ್ಸರ್ ಭಾರಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿದ್ದರು.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ವಿಶ್ವದ ಬ್ಯಾಟ್ಸ್ ಮನ್ ಗಳ ಪಟ್ಟಿ ಇಂತಿದೆ.
ಕ್ರಿಸ್ ಗೇಯ್ಲ್ (ವೆಸ್ಟ್ ಇಂಡೀಸ್)- 40 ಸಿಕ್ಸರ್ ಗಳು
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)- 37 ಸಿಕ್ಸರ್ ಗಳು
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)- 31 ಸಿಕ್ಸರ್ ಗಳು
ಬ್ರೆಂಡನ್ ಮೆಕ್ಕಲಮ್ (ನ್ಯೂಜಿಲೆಂಡ್)- 29 ಸಿಕ್ಸರ್ ಗಳು
ಹರ್ಷೆಲ್ ಗಿಬ್ಸ್ (ದಕ್ಷಿಣ ಆಫ್ರಿಕಾ)- 28 ಸಿಕ್ಸರ್ ಗಳು
ಸಚಿನ್ ತೆಂಡೂಲ್ಕರ್ (ಭಾರತ)- 27 ಸಿಕ್ಸರ್ ಗಳು
ಸನತ್ ಜಯಸೂರ್ಯ (ಶ್ರೀಲಂಕಾ)- 27 ಸಿಕ್ಸರ್ ಗಳು
ಸೌರವ್ ಗಂಗೂಲಿ (ಭಾರತ)- 25 ಸಿಕ್ಸರ್ ಗಳು
ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)- 23 ಸಿಕ್ಸರ್ ಗಳು
ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) 22 ಸಿಕ್ಸರ್ ಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com