ಧೋನಿ ಗ್ಲೌವ್ಸ್ ಆಯ್ತು, ಈಗ ಕ್ರಿಸ್ ಗೇಯ್ಲ್ ಬ್ಯಾಟ್ ಗೂ ಐಸಿಸಿ ಆಕ್ಷೇಪ!

ಧೋನಿ ಅವರ ಗ್ಲೌವ್ಸ್ ಕುರಿತಂತೆ ಆಕ್ಷೇಪ ಎತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಇದೀಗ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ಗೂ ಆಕ್ಷೇಪವೆತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಈ ಹಿಂದೆ ಭಾರತ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಗ್ಲೌವ್ಸ್ ಕುರಿತಂತೆ ಆಕ್ಷೇಪ ಎತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಇದೀಗ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ಗೂ ಆಕ್ಷೇಪವೆತ್ತಿದೆ.
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಕ್ರಿಕೆಟ್ ಗಿಂತಲೂ ಕ್ರಿಕೆಟೇತರ ವಿಚಾರಗಳಿಗಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ವಿಚಾರವಾಗಿ ಮತ್ತೆ ಏಸಿಸಿ ಸುದ್ದಿಗೆ ಗ್ರಾಸವಾಗಿದೆ.
ಧೋನಿ ಅವರು ಬಲಿದಾನ ಗ್ಲೋವ್ಸ್ ತೊಡುವುದಕ್ಕೆ ಒಪ್ಪಿಗೆ ನಿರಾಕರಿಸಿದ ನಂತರ ಕ್ರಿಸ್ ಗೇಯ್ಲ್ ಅವರ ಇಂಥದ್ದೇ ಕೋರಿಕೆಯನ್ನೂ ಐಸಿಸಿ ನಿರಾಕರಿಸಿದೆ. ಸ್ಫೋಟಕ ಬ್ಯಾಟಿಂಗ್‌ ಗೆ ಖ್ಯಾತಿಯಾಗಿರುವ ವೆಸ್ಟ್‌ ಇಂಡೀಸ್ ದೈತ್ಯ ಕ್ರಿಸ್‌ ಗೇಯ್ಲ್ 'ಯೂನಿವರ್ಸ್ ಬಾಸ್' ಎಂದೇ ಖ್ಯಾತಿ ಗಳಿಸಿದವರು. ಇದೀಗ ತಮ್ಮ ಬಿರುದನ್ನೇ ಕ್ರಿಸ್ ಗೇಯ್ಲ್ ಬ್ರ್ಯಾಂಡ್ ಮಾಡಲು ಮುಂದಾಗಿದ್ದು, ಇದೇ ಕಾರಣಕ್ಕೆ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಬ್ಯಾಟ್ ಮೇಲೆ 'ಯೂನಿವರ್ಸ್ ಬಾಸ್' ಸ್ಟಿಕರ್ ಅಂಟಿಸಲು ಗೇಯ್ಲ್ ಐಸಿಸಿ ಅನುಮತಿ ಕೇಳಿದ್ದರು. ಆದರೆ ಐಸಿಸಿ ಗೇಯ್ಲ್ ಮನವಿಯನ್ನು ತಿರಸ್ಕರಿಸಿದೆ.
ಈ ವೇಳೆ 'ಪಂದ್ಯದ ವೇಳೆ ಯಾವುದೇ ವೈಯಕ್ತಿಕ ವಸ್ತುಗಳನ್ನ ಬಳಸಬಾರದೆಂದು. ಅಲ್ಲದೇ, ಬಟ್ಟೆಯ ಮೇಲಾಗಲಿ ಅಥವಾ ಕ್ರೀಡಾ ಸಲಕರಣೆಗಳ ಮೇಲೆ ಯಾವುದೇ ವೈಯಕ್ತಿಕ ಸಂದೇಶ ತೋರ್ಪಡಿಸಲು ಅವಕಾಶವಿಲ್ಲ. ಹಾಗೆ ಮಾಡಿದರೆ ಕೌನ್ಸಿಲ್​ ನ ನಿಯಮಗಳನ್ನ ಉಲ್ಲಂಘಿಸದಂತಾಗುತ್ತದೆ ಎಂದೂ ಐಸಿಸಿ ಗೇಯ್ಲ್ ಗೆ ಪಾಠ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com