ಸಿಂಹಳೀಯರು ಒಡ್ಡಿದ ಗುರಿ ಬೆನ್ನತ್ತಿದ ಪ್ರಾರಂಬದಲ್ಲೇ ಎಡವಿತ್ತು. ಜಾನಿ ಬೈರ್ಸ್ಟೋವ್ (0) ಹಾಗೂ ಜೇಮ್ಸ್ ವಿನ್ಸ್ (14) ಗಳಿಸಿ ಔಟಾಗಿದ್ದರೆ ನಾಯಕ ಇಯಾನ್ ಮಾರ್ಗನ್ 21 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.
ಜೋ ರೂಟ್ (57 ) ಅರ್ಧಶತಕ ಗಳಿಸಿದ್ದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲು ಸಾಧ್ಯವಾಗಲಿಲ್ಲ. ಅದರ ಬೆನ್ನಲ್ಲೇ ಜೋಸ್ ಬಟ್ಲರ್ರನ್ನು (10) ಕೂಡಾ ಔಟಾಗಿ ತವರಿನಲ್ಲೇ ಆಂಗ್ಲ ಪಡೆಗೆ ಆಘಾತದ ಮೇಲೆ ಆಘಾತಗಳು ಉಂಟಾಗಿದ್ದವು,
ಇನ್ನು ಮೊಯಿನ್ ಅಲಿ (16) ಸ್ಟೋಕ್ಸ್ (82), ಕ್ರಿಸ್ ವೋಕ್ಸ್ (2), ಆದಿಲ್ ರಶೀದ್ (1), ಜೋಫ್ರಾ ಆರ್ಚರ್ (3) ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದರು.
ಇತ್ತ ಲಂಕಾ ಪರ ಲಸಿತ್ ಮಾಲಿಂಗ 4 ಧನಂಜಯ ಡಿಸಿಲ್ವ 3 ಇಸುರು ಉದಾನ ಎರಡು ವಿಕೆಟ್ ಪಡೆದು ಲಂಕಾಪಡೆ ಗೆಲುವಿನ ಕೇಕೆ ಹಾಕುವಂತೆ ಮಾಡಿದ್ದರು.
ಈ ಜಯದೊಡನೆ ಲಂಕಾ ತಾನಾಡಿದ್ದ ಆರು ಪಂದ್ಯದ ಪೈಕಿ ಎರಡು ಜಯ, ಎರಡು ಡ್ರಾ ಸಾಧಿಸಿ ಆರು ಅಂಕಗಳೊಡನೆ ಸೆಮೀಸ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನು ಸರಣಿ ಪ್ರಾರಂಭದಿಂದ ಸೋಲಿನ ರುಚಿ ನೋಡಿರದಿದ್ದ ಆಂಗ್ಲ ಪಡೆಗೆ ಇಂದು ಮೊದಲ ಕಹಿ ಅನುಭವವಾಗಿದೆ.