ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ನಾಯಕ ಆ್ಯರೋನ್ ಫಿಂಚ್ ಆಕರ್ಷಕ ಶತಕ ಹಾಗೂ ಡೇವಿಡ್ ವಾರ್ನರ್ ಅರ್ಧಶತಕದ (53) ನೆರವಿನಿಂದ 285 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು. ಆಸ್ಟ್ರೇಲಿಯಾ ನೀಡಿದ 286 ರನ್ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 221ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನುಭವಿಸಿತು.