ಬಡ ರೈತನ ಮಗ ಭಾರತ ಕಿರಿಯರ ಕ್ರಿಕೆಟ್ ತಂಡಕ್ಕೆ ಆಯ್ಕೆ!

ಉತ್ತರ ಪ್ರದೇಶದ ಸಣ್ಣ ರೈತರೊಬ್ಬರ ಪುತ್ರ ಕಾರ್ತಿಕ್‌ ತ್ಯಾಗಿ ಎಂಬ ಯುವಕ ಭಾರತ 19 ವಯೋಮಿತಿ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದು, ತ್ರಿಕೋನ ಸರಣಿ ಆಡಲು ಇಂಗ್ಲೆಂಡ್‌ ಪ್ರವಾಸಕ್ಕೆ ಕಿರಿಯರ ತಂಡದೊಂದಿಗೆ ತೆರಳಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹಾಪುರ್‌: ಉತ್ತರ ಪ್ರದೇಶದ ಸಣ್ಣ ರೈತರೊಬ್ಬರ ಪುತ್ರ ಕಾರ್ತಿಕ್‌ ತ್ಯಾಗಿ ಎಂಬ ಯುವಕ ಭಾರತ 19 ವಯೋಮಿತಿ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದು, ತ್ರಿಕೋನ ಸರಣಿ ಆಡಲು ಇಂಗ್ಲೆಂಡ್‌ ಪ್ರವಾಸಕ್ಕೆ ಕಿರಿಯರ ತಂಡದೊಂದಿಗೆ ತೆರಳಲಿದ್ದಾರೆ.
ಧನೌರಾದ ವೇಗಿ ಕಾರ್ತಿಕ್‌ ಭಾರತ ತಂಡಕ್ಕೆ ಆಯ್ಕೆಯಾಗಿರುವ ಹಾದಿ ಸುಗಮವಾಗಿರಲಿಲ್ಲ. ಏಕೆಂದರೆ ಆತನದು ಬಡ ರೈತ ಕುಟುಂಬ. ಆತನ ತಂದೆ ಯೋಗೇಂದ್ರ ಅವರು ತನ್ನ ಮಗನ ಕ್ರಿಕೆಟ್‌ ಜೀವನಕ್ಕಾಗಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. 
"19 ವಯೋಮಿತಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕುರಿತು ಬಿಸಿಸಿಐ ವ್ಯವಸ್ಥಾಪಕ ಅಮಿತ್‌ ಸಿದ್ದೇಶ್ವರ್‌ ಸಾರ್‌ ಅವರು ಕರೆ ಮಾಡಿ ತಿಳಿಸಿದ್ದರು. ನಾನು ಈ ಹಂತಕ್ಕೆ ತಲುಪಲು ತನ್ನ ತಂದೆ ಸಾಕಷ್ಟು ಕಷ್ಟ-ತ್ಯಾಗ ಅನುಭವಿಸಿದ್ದಾರೆ. ನನ್ನಲ್ಲಿದ್ದ ಕ್ರಿಕೆಟ್‌ ಆಸಕ್ತಿಯನ್ನು ನನ್ನ ತಂದೆ ಗುರುತಿಸಿ ಪ್ರೋತ್ಸಾಹಿಸಿದರು. ಹಾಗಾಗಿ, ಭಾರತ ತಂಡಕ್ಕೆ ಆಯ್ಕೆಯಾಗಿರುವ ಶ್ರೇಯ ನನ್ನ ತಂದೆಗೆ ಸೇರಬೇಕು " ಎಂದು ಕಾರ್ತಿಕ್‌ ತ್ಯಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 
ಕಾರ್ತಿಕ್‌ ತನ್ನ 13ನೇ ವಯಸ್ಸಿನಲ್ಲೇ ಕ್ರಿಕೆಟ್‌ ಆಡಲು ಪ್ರಾರಂಭಿಸಿದರು. ನಂತರ ಅವರು 14ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ನಂತರ, ಸ್ಥಿರ ಪ್ರದರ್ಶನ ಕಾಯ್ದುಕೊಂಡ ಧನೌರ ವೇಗಿ 16 ವಯೋಮಿತಿ ರಾಜ್ಯ ತಂಡದಲ್ಲೂ ಮುಂದುವರಿಸಿದರು. ನಂತರ, ಗಮನಾರ್ಹ ಪ್ರದರ್ಶನ ತೋರಿದ ಅವರು 19 ವಯೋಮಿತಿ ರಾಜ್ಯ ತಂಡಕ್ಕೂ ಆಯ್ಕೆಯಾಗುವುದಕ್ಕೂ ಮುನ್ನ ರಣಜಿ ಟ್ರೋಫಿಗೆ ನೇರವಾಗಿ ಆಯ್ಕೆಯಾದರು. 
"ನಮಗೆ ಕ್ರಿಕೆಟ್‌ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ, ನನ್ನ ಮಗನ ಉತ್ತಮ ಕ್ರಿಕೆಟ್‌ ಜೀವನಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಹೀನಾಯವಾಗಿತ್ತು. ಆದಾಗ್ಯೂ ಮಗನ ಕ್ರಿಕೆಟ್‌ಗೆ ನಮ್ಮ ಕೈಲಾದಷ್ಟು ಸಹಕಾರ ನೀಡಿದೆವು ಎಂದು ಕಾರ್ತಿಕ್‌ ತ್ಯಾಗಿ ಅವರ ತಂದೆ ಯೋಗೇಂದ್ರ ಹೇಳಿದ್ದಾರೆ. 
ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಭಾರತ ನಡುವೆ ತ್ರಿಕೋನ ಸರಣಿ ಜುಲೈ 19 ರಿಂದ ಆಂಗ್ಲರ ನಾಡಿನಲ್ಲಿ ಆರಂಭವಾಗಲಿದೆ. 19 ವಯೋಮಿತಿ ಭಾರತ ತಂಡ ಜುಲೈ 15 ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com