ವಿರಾಟ್ ಕೊಹ್ಲಿ 40ನೇ ಶತಕ: ಆಸ್ಟ್ರೇಲಿಯಾಗೆ 251 ರನ್‌ ಗುರಿ

ನಾಯಕ ವಿರಾಟ್‌ ಕೊಹ್ಲಿ (116 ರನ್‌, 120 ಎಸೆತಗಳು) ವೃತ್ತಿ ಜೀವನದ 40ನೇ ಶತಕದ ಹೊರತಾಗಿಯೂ ಪ್ಯಾಟ್‌ ಕಮಿನ್ಸ್‌ (29 ಕ್ಕೆ 4) ಅವರ ಶಿಸ್ತುಬದ್ಧ ದಾಳಿಗೆ ಸಿಲುಕಿದ ಭಾರತ, ಎರಡನೇ ಏಕದಿನ ಪಂದ್ಯದಲ್ಲಿ
ವಿರಾಟ್ ಕೊಹ್ಲಿ 40ನೇ ಶತಕ: ಆಸ್ಟ್ರೇಲಿಯಾಗೆ 251 ರನ್‌ ಗುರಿ
ವಿರಾಟ್ ಕೊಹ್ಲಿ 40ನೇ ಶತಕ: ಆಸ್ಟ್ರೇಲಿಯಾಗೆ 251 ರನ್‌ ಗುರಿ
ನಾಗ್ಪುರ: ನಾಯಕ ವಿರಾಟ್‌ ಕೊಹ್ಲಿ (116 ರನ್‌, 120 ಎಸೆತಗಳು) ವೃತ್ತಿ ಜೀವನದ 40ನೇ ಶತಕದ ಹೊರತಾಗಿಯೂ ಪ್ಯಾಟ್‌ ಕಮಿನ್ಸ್‌ (29 ಕ್ಕೆ 4) ಅವರ ಶಿಸ್ತುಬದ್ಧ ದಾಳಿಗೆ ಸಿಲುಕಿದ ಭಾರತ, ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 250 ರನ್‌ಗಳಿಗೆ ಆಲ್‌ಔಟ್‌ ಆಯಿತು. 
ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯರು, 48.2 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು  250 ರನ್‌ ಸೀಮಿತವಾಯಿತು. ಪ್ರವಾಸಿ ಆಸ್ಟ್ರೇಲಿಯಾಗೆ 251 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತು. 
ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್‌ ಜೋಡಿಯು ಹೆಚ್ಚು ಹೊತ್ತು ಜತೆಯಾಗಲಿಲ್ಲ. ಆರು ಎಸೆತಗಳನ್ನು ಎದುರಿಸಿದ ರೋಹಿತ್, ಮೊಟ್ಟ ಮೊದಲ ಬಾರಿ ತವರು ನೆಲದಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್‌ ಆಗಿದ್ದ ಶಿಖರ್‌ ಧವನ್‌ ಈ ಪಂದ್ಯದಲ್ಲಿ 21 ರನ್‌ ಗಳಿಸುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಮ್ಯಾಕ್ಸ್‌ವೆಲ್‌ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. 
32 ಎಸೆತಗಳಲ್ಲಿ 18 ರನ್‌ ಗಳಿಸಿ ಅಂಬಾಟಿ ರಾಯುಡು, ನಥಾನ್‌ ಲಿಯಾನ್‌ ಎಸೆತದಲ್ಲಿ ಚೆಂಡನ್ನು ಪ್ಯಾಡ್‌ ಮೇಲೆ ಹಾಕಿಕೊಂಡರು. ನಂತರ, ಜತೆಯಾದ ನಾಯಕ ಕೊಹ್ಲಿ ಹಾಗೂ ವಿಜಯ್‌ ಶಂಕರ್‌ ಜೋಡಿಯು ಮುರಿಯದ ನಾಲ್ಕನೇ ವಿಕೆಟ್‌ಗೆ 81 ರನ್‌ಗಳನ್ನು ತಂಡಕ್ಕೆ ಅಮೋಘ ಕಾಣಿಕೆ ನೀಡಿತು. ಆ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ಈ ಜೋಡಿ ನೆರವಾಯಿತು. 
41 ಎಸೆತಗಳಲ್ಲಿ ಒಂದು ಸಿಕ್ಸ್‌ ಹಾಗೂ ಐದು ಬೌಂಡರಿ ಸಿಡಿಸಿ 46 ರನ್‌ ಗಳಿಸಿ ಅರ್ಧ ಶತಕದಂಚಿನಲ್ಲಿದ್ದ ವಿಜಯ್‌ ಶಂಕರ್ ರನ್‌ ಕದಿಯುವ ಭರದಲ್ಲಿ ರನ್ ಔಟ್‌ ಆದರು. ಕಳೆದ ಪಂದ್ಯದ ಗೆಲುವಿನ ರೂವಾರಿಯಾಗಿದ್ದ ಕೇದಾರ್‌ ಜಾಧವ್ ಕೇವಲ 11 ರನ್‌ಗಳಿಗೆ ಸೀಮಿತರಾದರು. ಉತ್ತಮ ಲಯದಲ್ಲಿದ್ದ ಮಹೇಂದ್ರ ಸೀಂಗ್ ಧೋನಿ, ಮೊದಲ ಎಸೆತದಲ್ಲೆ ಝಂಪಾಗೆ ವಿಕೆಟ್‌ ಒಪ್ಪಿಸಿದರು.  
ನಂತರ, ರವೀಂದ್ರ ಜಡೇಜಾ ತಾಳ್ಮೆಯ ಬ್ಯಾಟಿಂಗ್‌ಗೆ ಮೊರೆ ಹೋದರು. ಎದುರಿಸಿದ 40 ಎಸೆತಗಳಲ್ಲಿ 21 ರನ್‌ ಗಳಿಸಿ ನಾಯಕನಿಗೆ ಉತ್ತಮ ಸಾಥ್‌ ನೀಡುತ್ತಿದ್ದರು. ಆದರೆ, ಪ್ಯಾಟ್‌ ಕಮಿನ್ಸ್‌ ಅವರನ್ನು ಹೆಚ್ಚು ಹೊತ್ತು ಮುಂದುವರಿಯಲು ಬಿಡಲಿಲ್ಲ. 
ಅದ್ಭುತ ಬ್ಯಾಟಿಂಗ್‌ ಮಾಡಿದ ನಾಯಕ ವಿರಾಟ್‌ ಕೊಹ್ಲಿ ಆಸೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಅವರು, ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕಲಿಲ್ಲ. ಶಂಕರ್ ಬಿಟ್ಟರೆ ಯಾರೂ ಹೆಚ್ಚು ಹೊತ್ತು ಸಾಥ್‌ ನೀಡದೆ ಇದ್ದರೂ ಏಕಾಂಗಿಯಾಗಿ ಇನಿಂಗ್ಸ್‌ ಕಟ್ಟಿದ ಕೊಹ್ಲಿ, ಭಾರತಕ್ಕೆ ಆಸರೆಯಾದರು. 120 ಎಸೆತಗಳನ್ನು ಎದುರಿಸಿದ ಅವರು, 10 ಬೌಂಡರಿಯೊಂದಿಗೆ 166 ರನ್‌ ಗಳಿಸಿ ವೃತ್ತಿ ಜೀವನದ 40 ನೇ ಶತಕ ಸಿಡಿಸಿದರು. ಇವರ ಶತಕದ ಬಲದಿಂದ ಭಾರತ, ಸ್ಪರ್ಧಾತ್ಮ ರನ್‌ ಕಲೆ ಹಾಕಲು ಸಾಧ್ಯವಾಯಿತು. ಕೊಹ್ಲಿ ಔಟ್‌ ಆದ ಬಳಿಕ ಕುಲ್ದೀಪ್‌  ಯಾದವ್‌ ಹಾಗೂ ಬೂಮ್ರಾ ಕೇವಲ ಎರಡು ರನ್‌ ಅಂತರದಲ್ಲಿ ವಿಕೆಟ್‌ ಒಪ್ಪಿಸಿದರು. 
ಆಸೀಸ್‌ ಪರ ಮಿಂಚಿನ ದಾಳಿ ನಡೆಸಿದ ಪ್ಯಾಟ್‌ ಕಮಿನ್ಸ್‌ ಒಂಬತ್ತು ಓವರ್‌ಗಳಲ್ಲಿ 29 ರನ್‌ ನೀಡಿ ನಾಲ್ಕು ವಿಕೆಟ್‌ ಕಿತ್ತರು. ಆ್ಯಡಂ ಝಂಪಾ ಎರಡು ವಿಕೆಟ್‌ ಪಡೆದರು. 
ಸಂಕ್ಷಿಪ್ತ ಸ್ಕೋರ್‌
ಭಾರತ: 250 (48.2)
ವಿರಾಟ್‌ ಕೊಹ್ಲಿ-116
ವಿಜಯ್‌ ಶಂಕರ್‌-46
ಬೌಲಿಂಗ್‌: ಪ್ಯಾಟ್‌ ಕಮಿನ್ಸ್‌ 29 ಕ್ಕೆ 4, ಆ್ಯಡಂ ಝಂಪಾ 62 ಕ್ಕೆ 2.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com