ಖಲೀಲ್ ಅಹ್ಮದ್-ವಿರಾಟ್ ಕೊಹ್ಲಿ
ಕ್ರಿಕೆಟ್
ಮುಯ್ಯಿಗೆ ಮುಯ್ಯಿ: ವಿಕೆಟ್ ಪಡೆದು ಅತಿರೇಕದ ವರ್ತನೆ ತೋರಿದ ಖಲೀಲ್‌ಗೆ ಕೊಹ್ಲಿ ಪ್ರತ್ಯುತ್ತರ, ವಿಡಿಯೋ ವೈರಲ್!
ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಅದೇ ರೀತಿ ಹೈದರಾಬಾದ್ ತಂಡದ ಬೌಲರ್ ಖಲೀಲ್ ಅಹ್ಮದ್ ಆರ್ಸಿಬಿ...
ಬೆಂಗಳೂರು: ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಅದೇ ರೀತಿ ಹೈದರಾಬಾದ್ ತಂಡದ ಬೌಲರ್ ಖಲೀಲ್ ಅಹ್ಮದ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ವಿಕೆಟ್ ಪಡೆದ ನಂತರ ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ್ದು ಇದೀಗ ಟ್ರೋಲ್ ಗೆ ಗುರಿಯಾಗುವಂತೆ ಮಾಡಿದೆ.
175 ರನ್ ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 7 ಎಸೆತದಲ್ಲಿ 16 ರನ್ ಗಳಿಸಿದ್ದಾಗ ಖಲೀಲ್ ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪಡೆದ ಖುಷಿಯಲ್ಲಿ ಖಲೀಲ್ ವಿಚಿತ್ರವಾಗಿ ಸಂಭ್ರಸಿದ್ದರು. ಇನ್ನು ಗೆಲುವಿನ ಬೆನ್ನಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇಳೆ ಕೊಹ್ಲಿ ವೇಗಿ ಖಲೀಲ್ ಅವರನ್ನು ಅವರದ್ದೇ ಶೈಲಿಯಲ್ಲಿ ಕಾಲೆಳೆದರು.
ಈ ಪಂದ್ಯದಲ್ಲಿ ಹೆಟ್ಮರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ತಂಡದ 6 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಟೂರ್ನಿಯಲ್ಲಿ ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ವಿದಾಯ ಹೇಳಿತು.
Virat Kohli is such an amazing guy. Here he mocks Khaleel’s celebration after Khaleel dismissed him. Always happy when youngsters do well. Can remember the way he rejoiced Karun Nair’s success. pic.twitter.com/y1OtzdqbNR
— The Goan Patiala
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ