ಎಂಎಸ್ ಧೋನಿ-ಅದಿಲ್ ರಶೀದ್
ಕ್ರಿಕೆಟ್
ಸ್ಪಿನ್ನರ್ ರಶೀದ್ ಹಿಮ್ಮುಖ ರನೌಟ್ ಧೋನಿಯನ್ನು ಮೀರಿಸುವಂತಿದೆ; ವಿಡಿಯೋ ವೈರಲ್!
ಪಾಕಿಸ್ತಾನ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಅದಿಲ್ ರಶೀದ್ ಮಾಡಿದ ಅದ್ಭುತ ರನೌಟ್ ಎಲ್ಲರನ್ನು ನಿಬ್ಬೆರಗಾಗಿಸಿದೆ.
ಪಾಕಿಸ್ತಾನ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಅದಿಲ್ ರಶೀದ್ ಮಾಡಿದ ಅದ್ಭುತ ರನೌಟ್ ಎಲ್ಲರನ್ನು ನಿಬ್ಬೆರಗಾಗಿಸಿದೆ.
ತಂಡದ ಪರ 27ನೇ ಓವರ್ ಬೌಲಿಂಗ್ ಮಾಡಿದ ಅದಿಲ್ ರಶೀದ್ ಅವರ ಕೊನೆಯ ಎಸೆತದಲ್ಲಿ ಸರ್ಫರಾಜ್ ಅಹ್ಮದ್ ರನ್ ಕದಿಯಲು ಪ್ರಯತ್ನಿಸಿದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಬಾಬರ್ ಜೋರಾಗಿ ಓಡಿದರು. ಆದರೆ ಸರ್ಫರಾಜ್ ರನ್ ಬೇಡ ಎಂದು ಹಿಂದಕ್ಕೆ ಹೋದರು. ಆದರೆ ಅಷ್ಟರಲ್ಲಿ ಕೀಪರ್ ಜೋಸ್ ಬಟ್ಲರ್ ಚೆಂಡನ್ನು ಅದಿಲ್ ರಶೀದ್ ಕೈಗೆ ಎಸೆದರು. ಚೆಂಡನ್ನು ಹಿಡಿದ ರಶೀದ್ ಹಿಮ್ಮುಖವಾಗಿ ಚೆಂಡನ್ನು ವಿಕೆಟ್ ಗೆ ಎಸೆದು ರನೌಟ್ ಮಾಡಿದರು.
ಇಂತಹ ಹಿಮ್ಮುಖ ರನೌಟ್ ಅಥವಾ ಸ್ಟಂಪ್ ಮಾಡುವುದರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ನಿಸ್ಸೀಮರು. ಅವರ ಹಿಮ್ಮುಖ ರನೌಟ್ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 0-4ರಿಂದ ಸರಣಿ ಸೋತಿದೆ.

