ಧೋನಿ ಕೈಯಲ್ಲಿ ಆಗದಿದ್ದನ್ನು ಮಾಡಿ ತೋರಿಸಿದ ಜೋಸ್ ಬಟ್ಲರ್, ವಿಡಿಯೋ ವೈರಲ್!

ಕ್ರಿಕೆಟ್ ಜಗತ್ತಿನಲ್ಲಿ ವೇಗದ ಸ್ಟಂಪಿಂಗ್, ರನೌಟ್ ನಲ್ಲಿ ತಮ್ಮದೇ ರೀತಿಯ ವಿಶಿಷ್ಠ ಶೈಲಿ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗಮನ ಸೆಳೆದಿದ್ದಾರೆ.
ಎಂಎಸ್ ಧೋನಿ-ಜೋಸ್ ಬಟ್ಲರ್
ಎಂಎಸ್ ಧೋನಿ-ಜೋಸ್ ಬಟ್ಲರ್
Updated on
ಕ್ರಿಕೆಟ್ ಜಗತ್ತಿನಲ್ಲಿ ವೇಗದ ಸ್ಟಂಪಿಂಗ್, ರನೌಟ್ ನಲ್ಲಿ ತಮ್ಮದೇ ರೀತಿಯ ವಿಶಿಷ್ಠ ಶೈಲಿ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗಮನ ಸೆಳೆದಿದ್ದಾರೆ. ಇನ್ನು ಧೋನಿ ರೀತಿಯ ಶೈಲಿಯನ್ನು ಇತ್ತೀಚಿನ ಕೆಲ ವಿಕೆಟ್ ಕೀಪರ್ ಗಳು ಅನುಕರಿಸುತ್ತಿದ್ದಾರೆ. ಅದೇ ರೀತಿ ಧೋನಿ ಪ್ರಯತ್ನಿಸಿ ವಿಫಲರಾಗಿದ್ದ ಶೈಲಿಯನ್ನೇ ಬಳಸಿ ಇಂಗ್ಲೆಂಡ್ ತಂಡದ ಕೀಪರ್ ಜೋಸ್ ಬಟ್ಲರ್ ರನೌಟ್ ಮಾಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಕೊನೆಯ ಹಾಗೂ ಐದನೇ ಏಕದಿನ ಪಂದ್ಯದಲ್ಲಿ ಪಾಕ್ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಅವರನ್ನು ರನೌಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ತಂಡದ ಪರ 32ನೇ ಓವರ್ ಅನ್ನು ಸ್ಪಿನ್ನರ್ ಮೊಹಿನ್ ಅಲಿ ಬೌಲಿಂಗ್ ಮಾಡಿದ್ದರು. ಈ ವೇಳೆ ಸರ್ಫರಾಜ್ ಚೆಂಡನ್ನು ಥರ್ಡ್ ಮ್ಯಾನ್ ಕಡೆ ಬಾರಿಸಿದರು. ಈ ವೇಳೆ ಅಲರ್ಟ್ ಆದ ಬಟ್ಲರ್ ತಮ್ಮ ಕಾಲನ್ನು ಅಗಲಿಸಿ ಚೆಂಡನ್ನು ತಡೆದರು. 
ಚೆಂಡನ್ನು ಬಾರಿಸಿ ರನ್ ಕದಿಯುವ ಭರದಲ್ಲಿ ಸರ್ಫರಾಜ್ ಕ್ರೀಸ್ ಬಿಟ್ಟು ಮುಂದೆ ಸಾಗಿದ್ದರು. ಕೂಡಲೇ ಚೆಂಡನ್ನು ಹಿಡಿದ ಬಟ್ಲರ್ ರನೌಟ್ ಮಾಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. 
2016ರ ಐಪಿಎಲ್ ಟೂರ್ನಿ ವೇಳೆ ಪುಣೆ ಪರ ಆಡಿದ್ದ ಎಂಎಸ್ ಧೋನಿ ಸಹ ಇದೇ ರೀತಿ ಪ್ರಯತ್ನಿಸಿದ್ದರು. ಆದರೆ ಅಂದು ಧೋನಿಗೆ ರನೌಟ್ ಮಾಡಲು ಸಾಧ್ಯವಾಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com