ಇಂದೋರ್ ಟೆಸ್ಟ್: ಎರಡನೇ ದ್ವಿಶತಕ ಸಿಡಿಸಿದ ಕನ್ನಡಿಗ ಮಯಾಂಕ್, ಬೃಹತ್ ಮೊತ್ತದತ್ತ ಟಿಂ ಇಂಡಿಯಾ

ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ಇಲ್ಲಿನ ಹೋಳ್ಕರ್ ಕ್ರಿಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ದಿನ ವೃತ್ತಿ ಜೀವನದ ಎರಡನೇ ದ್ವಿಶತಕ ಪೂರೈಸಿದರು.
ಇಂದೋರ್ ಟೆಸ್ಟ್: ಎರಡನೇ ದ್ವಿಶತಕ ಸಿಡಿಸಿದ ಕನ್ನಡಿಗೆ ಮಯಾಂಕ್, ಬೃಹತ್ ಮೊತ್ತದತ್ತ ಟಿಂ ಇಂಡಿಯಾ
ಇಂದೋರ್ ಟೆಸ್ಟ್: ಎರಡನೇ ದ್ವಿಶತಕ ಸಿಡಿಸಿದ ಕನ್ನಡಿಗೆ ಮಯಾಂಕ್, ಬೃಹತ್ ಮೊತ್ತದತ್ತ ಟಿಂ ಇಂಡಿಯಾ

ಇಂದೋರ್: ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ಇಲ್ಲಿನ ಹೋಳ್ಕರ್ ಕ್ರಿಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ದಿನ ವೃತ್ತಿ ಜೀವನದ ಎರಡನೇ ದ್ವಿಶತಕ ಪೂರೈಸಿದರು. ಇದಕ್ಕೂ ಮುನ್ನ ಅವರು ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ದ್ವಿಶತಕ ಸಿಡಿಸಿದ್ದರು. ಅಲ್ಲದೇ, ಅವರು ರೋಹಿತ್ ಶರ್ಮಾ ಜತೆ ಮುರಿಯದ ಮೊದಲನೇ ವಿಕೆಟ್‌ಗೆ 317 ರನ್ ಗಳಿಸಿದ್ದರು.

ಅದ್ಭುತ ಲಯದಲ್ಲಿರುವ ಮಯಾಂಕ್ ಅಗರ್ವಾಲ್ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಸ್ಥಿರ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದಾಾರೆ. 28ರ ಪ್ರಾಯದ ಅಗರ್ವಾಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳಿಂದ 340 ರನ್ ದಾಖಲಿಸಿದ್ದರು.

ಅಗರ್ವಾಲ್ ಈ ಇನಿಂಗ್ಸ್‌‌ನಲ್ಲಿ 330 ಎಸೆತಗಳಲ್ಲಿ 243 ರನ್ ಗಳಿಸಿ ಔಟ್ ಆದರು. ಇವರ ಅದ್ಭುತ ಇನಿಂಗ್ಸ್‌ ನಲ್ಲಿ ಎಂಟು ಸಿಕ್ಸರ್ ಹಾಗೂ 28 ಬೌಂಡರಿಗಳು ಇದ್ದವು. ದ್ವಿಶತಕದ ಜತೆಗೆ, ಮಯಾಂಕ್ ಮತ್ತೊೊಂದು ಮೈಲುಗಲ್ಲು ಸೃಷ್ಠಿಸಿದರು. ಬಾಂಗ್ಲಾದೇಶ ವಿರುದ್ಧ ಒಂದೇ ಇನಿಂಗ್ಸ್‌‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌‌ಮನ್ ಎನಿಸಿಕೊಂಡರು. 2004/05ರಲ್ಲಿ ಢಾಕಾದಲ್ಲಿ 248 ರನ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ.

ಇತ್ತೀಚಿನ ವರದಿ ಬಂದಾಗ ಟೀಂ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿದೆ. ರವೀಂದ್ರ ಜಡೇಜಾ, ಉಮೇಶ್ ಯಾದವ್ ಕಣದಲ್ಲಿದ್ದು ಕ್ರಮವಾಗಿ 60 ಮತ್ತು 25 ರನ್ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com