ಇಂದೋರ್ ಟೆಸ್ಟ್:  ಶಮಿ, ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ 150ಕ್ಕೆ ಆಲೌಟ್

ಮೊಹಮ್ಮದ್ ಶಮಿ ಅವರ ಅದ್ಭುತ ರಿವರ್ಸ್ ಸ್ವಿಂಗ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅದ್ಭುತ ಪ್ರದರ್ಶನ ಪ್ರವಾಸಿ ಬಾಂಗ್ಲಾ ಹುಲಿಗಳನ್ನು ಕೇವಲ 150ರನ್ನುಗಳಿಗೆ ಕಟ್ಟಿ ಹಾಕಿದೆ.
ಇಂದೋರ್ ಟೆಸ್ಟ್:  ಶಮಿ, ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ 150ಕ್ಕೆ ಆಲೌಟ್
ಇಂದೋರ್ ಟೆಸ್ಟ್: ಶಮಿ, ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ 150ಕ್ಕೆ ಆಲೌಟ್

ಇಂದೋರ್: ಮೊಹಮ್ಮದ್ ಶಮಿ ಅವರ ಅದ್ಭುತ ರಿವರ್ಸ್ ಸ್ವಿಂಗ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅದ್ಭುತ ಪ್ರದರ್ಶನ ಪ್ರವಾಸಿ ಬಾಂಗ್ಲಾ ಹುಲಿಗಳನ್ನು ಕೇವಲ 150ರನ್ನುಗಳಿಗೆ ಕಟ್ಟಿ ಹಾಕಿದೆ.

ಗುರುವಾರ ಪ್ರಾರಂಭಗೊಂಡ ಭಾರತ-ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾ 150 ರನ್ ಗಳಿಗೆ ಆಲೌಟ್ ಆಗಿದೆ.

ಬಾಂಗ್ಲಾ ಪರವಾಗಿ ಮುಶ್ಫಿಕೂರ್ ರಹೀಮ್ 43 ರನ್ ಸಿಡಿಸಿದ್ದರೆ ನಾಯಕ ಮೊಮಿನುಲ್ ಹಕ್ ೩೭ ರನ್ ಗಳಿಸಿದರು. ಆದರೆ ತಂಡದ ಬೇರಾವ ಆಟಗಾರರೂ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಲಿಲ್ಲ. ಚಹಾ ವಿರಾಮದ ವೇಳೆಗೆ ಏಳು ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ 140 ರನ್ ಗಳಿಸಿತ್ತು. ಅದಾಗಿ ಮತ್ತೆ ಹತ್ತು ರನ್ ಪೇರಿಸುವಷ್ಟರಲ್ಲಿ ಮೂರು ವಿಕೆಟ್ ಬಿದ್ದಿದೆ.

ಭಾರತೀಯ ಬೌಲರ್ ಗಳಾದ ಶಮಿ ಮೂರು ವಿಕೆಟ್‌ಗಳನ್ನು ಪಡೆದರೆ, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ.

ಭಾರತಕ್ಕೆ ಆರಂಭಿಕ ಆಘಾತ 

ಇನ್ನು ಬಾಂಗ್ಲಾ ಮೊದಲ ಇನ್ನಿಂಗ್ಸ್ ಆಲಿಔಟ್ ನಂತರ ತನ್ನ ಇನ್ನಿಂಗ್ಸ್ ಪ್ರಾರಂಭಿಸಿದ ಟೀಂ ಇಂಡಿಯಾಗೆ ಪ್ರಾರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಆಘಾತವಾಗಿದೆ. ಅನುಭವಿ ಬ್ಯಾಟ್ಸ್ ಮನ್ ರೋಹಿತ್ 14 ಬಾಲ್ ಗಳಲ್ಲಿ ಕೇವಲ 6 ರನ್ ಗಳಿಸಿ ಬಾಂಗ್ಲಾ ವೇಗಿ ಅಬು ಜಯೇದ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ಸಧ್ಯ ಟೀಂ ಇಂಡಿಯಾ1 23 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ79 ರನ್ ಗಳಿಸಿದೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com