ದ್ವಿಶತಕದ ಹಾದಿಯಲ್ಲಿ ಮಾಯಾಂಕ್ ಗೆ ಕೊಹ್ಲಿ ನೀಡಿದ ಮೇಸೆಜ್ ಏನಾಗಿತ್ತು ಗೊತ್ತಾ?
ಇಂದೋರ್ : ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ ವಾಲ್ ದ್ವಿಶತಕ ಸಿಡಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದಾರೆ.
330 ಎಸೆತಗಳಲ್ಲಿ 234 ರನ್ ಗಳಿಸುವ ಮೂಲಕ ಟೆಸ್ಟ್ ನಲ್ಲಿ ಮೂರನೇ ಶತಕ ಗಳಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿದ್ದು, 343 ರನ್ ಗಳ ಮುನ್ನಡೆ ಸಾಧಿಸಿದೆ.
ರವೀಂದ್ರ ಜಡೇಜಾ ಅವರ ಅರ್ಧಶತಕ ಹಾಗೂ ಮಾಯಾಂಕ್ ಅಗರ್ ವಾಲ್ ಅವರ ದ್ವಿಶತಕದಿಂದ ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತು.
ಮಾಯಾಂಕ್ ಅಗರ್ ವಾಲ್ 150 ರನ್ ಗಳನ್ನು ಪೂರೈಸಿದಾಗ ಡ್ರೆಸ್ಸಿಂಗ್ ರೂಮ್ ನಲ್ಲಿ ಖುಷಿಯ ಅಲೆಯಲ್ಲಿ ತೇಲುತ್ತಿದ್ದ ಟೀಂ ಇಂಡಿಯಾ ಆಟಗಾರರತ್ತ ಬ್ಯಾಟ್ ಎತ್ತಿ ಸಂತೋಷ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಮಾಡುವಂತೆ ಕೈಯಲ್ಲಿಯೇ ಸೂಚನೆ ನೀಡಿದ್ದಾರೆ.ಮಾಯಾಂಕ್ ಅಗರ್ ವಾಲ್ ಕೂಡಾ ಹೆಬ್ಬೆರಳು ಎತ್ತಿ ಓಕೆ ಎಂದಿದ್ದಾರೆ. ಅದೇ ರೀತಿಯಲ್ಲಿ ದ್ವಿಶತಕವನ್ನು ಭಾರಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ