'ಜನವರಿಯವರೆಗೆ ಏನೂ ಕೇಳಬೇಡಿ' : ಧೋನಿ

ಅಂತಾರಾಷ್ಟ್ರೀಯ ಪಂದ್ಯಗಳಿಂದ ವಿರಾಮ ಪಡೆದುಕೊಂಡಿರುವ  ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ , ಜನವರಿಯ ವರೆಗೂ ನನಗೆ ಏನು ಕೇಳು ಬೇಡಿ ಎಂದು ತಿಳಿಸಿದ್ದಾರೆ. 
ಎಂಎಸ್ ಧೋನಿ
ಎಂಎಸ್ ಧೋನಿ
Updated on

ಮುಂಬೈ : ಅಂತಾರಾಷ್ಟ್ರೀಯ ಪಂದ್ಯಗಳಿಂದ ವಿರಾಮ ಪಡೆದುಕೊಂಡಿರುವ  ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ , ಜನವರಿಯ ವರೆಗೂ ನನಗೆ ಏನು ಕೇಳು ಬೇಡಿ ಎಂದು ತಿಳಿಸಿದ್ದಾರೆ. 

ಜನವರಿಯ ವರೆಗೂ ನನಗೆ ಏನು ಕೇಳು ಬೇಡಿ (ಜನವರಿ ತಕ್ಕ ಮತ್ ಪೂಚೋ) ಎಂದು ಪತ್ರಕರ್ತರಿಗೆ ಧೋನಿ ತಿಳಿಸಿದ್ದಾರೆ. ಮಾಹಿ ಅವರು ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯದ ಸೆಮಿಫೈನಲ್ಸ್ ಪಂದ್ಯದ ಬಳಿಕ ಅಂಗಳಕ್ಕೆ ಇಳಿದಿಲ್ಲ.

ಮುಂದಿನ ವರ್ಷದಲ್ಲಿ ಧೋನಿ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಧೋನಿ ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.

ಮುಂದಿನ ವರ್ಶದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ರಿಷಭ್ ಪಂತ್ ಅವರಂತಹ ಬಿಸಿ ರಕ್ತದ ಯುವಕರಿಗೆ ಅವಕಾಶ ನೀಡಬೇಕೆಂಬ ರಾಷ್ಟ್ರೀಯ ಆಯ್ಕೆ ಸಮಿತಿಯ ಉದ್ದೇಶವೂ ಧೋನಿ ಅವರಿಗೆ ಗೊತ್ತಿದೆ ಎಂದು ಸಮಿತಿಯ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com