ಟೀಂ ಇಂಡಿಯಾ ವಿರುದ್ಧ 2ನೇ ಟೆಸ್ಟ್ ಪಂದ್ಯ ಸೋಲಿನ ಬಳಿಕ ಆಫ್ರಿಕಾಗೆ ದೊಡ್ಡ ಆಘಾತ!

ಭಾರತದ ವಿರುದ್ಧ ಇಂದು ಮುಕ್ತಾಯವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹರಾಜ್ ಅವರು ಗಾಯದಿಂದಾಗಿ ರಾಂಚಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್...
ಕೇಶವ್ ಮಹಾರಾಜ್
ಕೇಶವ್ ಮಹಾರಾಜ್
Updated on

ಪುಣೆ: ಭಾರತದ ವಿರುದ್ಧ ಇಂದು ಮುಕ್ತಾಯವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹರಾಜ್ ಅವರು ಗಾಯದಿಂದಾಗಿ ರಾಂಚಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಸ್ಥಾನಕ್ಕೆ ಜಾರ್ಜ್ ಲಿಂಡೆ ಅವರನ್ನು ಗುರುತಿಸಲಾಗಿದೆ.

ಕೇಶವ್ ಮಹರಾಜ್ ಅವರು ಎರಡನೇ ಪಂದ್ಯ ಎರಡನೇ ದಿನ ಫೀಲ್ಡಿಂಗ್  ಮಾಡುವ ವೇಳೆ ಭುಜದಲ್ಲಿ ನೋವು ಕಾಣಿಸಿಕೊಂಡಿತ್ತು. ಇಂದು ಅವರ ಭುಜಕ್ಕೆ ಎಂಆರ್‌ಐ ಸ್ಕ್ಯಾನ್ ಮಾಡಲಾಗಿತ್ತು. ರಾಂಚಿಯಲ್ಲಿ ಮುಂದಿನ ಶನಿವಾರ ಆರಂಭವಾಗುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಕೇಶವ್ ಮಹರಾಜ್ ಅವರು ಆಡಲು ಸಾಧ್ಯವಾಗುವುದಿಲ್ಲ ಎಂದು ಸ್ಕ್ಯಾನ್ ವರದಿಗಳು ಧೃಡೀಕರಿಸಿವೆ.

ಇಂದು ಮುಕ್ತಾಯವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇನಿಂಗ್ಸ್‌ ಹಾಗೂ 137 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 2-0 ಅಂತರದಲ್ಲಿ ವಶ ಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಕೇಶವ್ ಮಹರಾಜ್ ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ, ಪ್ರಥಮ ಇನಿಂಗ್ಸ್‌ 72 ರನ್ ಹಾಗೂ ದ್ವಿತೀಯ ಇನಿಂಗ್ಸ್‌‌ನಲ್ಲಿ 22 ರನ್ ಗಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com