ರಾಷ್ಟ್ರೀಯ ತಂಡದಲ್ಲಿ ಫೇಲ್, ಪ್ರಾದೇಶಿಕ ಟೂರ್ನಿಯಲ್ಲಿ ಸ್ಟಾರ್; ಕೆಎಲ್ ರಾಹುಲ್ ಶತಕ: ಕರ್ನಾಟಕಕ್ಕೆ 2ನೇ ಜಯ

ರಾಷ್ಟ್ರೀಯ ತಂಡದಲ್ಲಿ ಉತ್ತರ ಆಡಲು ವಿಫಲವಾಗಿದ್ದ ಕೆಎಲ್ ರಾಹುಲ್ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್

ಬೆಂಗಳೂರು: ರಾಷ್ಟ್ರೀಯ ತಂಡದಲ್ಲಿ ಉತ್ತರ ಆಡಲು ವಿಫಲವಾಗಿದ್ದ ಕೆಎಲ್ ರಾಹುಲ್ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 

ಕೆ.ಎಲ್ ರಾಹುಲ್(131) ಶತಕ ಹಾಗೂ ರೋನಿತ್ ಮೋರೆ(42 ಕ್ಕೆ 3) ಅವರ ಮಾರಕ ದಾಳಿಯ ನೆರವಿನಿಂದ ಕರ್ನಾಟಕ ತಂಡ  ಎಲೈಟ್ ‘ಎ’ ಗುಂಪಿನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಕೇರಳ ವಿರುದ್ಧ 60 ರನ್ ಗಳಿಂದ ಜಯ ಸಾಧಿಸಿತು. ಆ ಮೂಲಕ ಅಂಕಪಟ್ಟಿಯಲ್ಲಿ 10 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು. 

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 49.5 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 294 ರನ್ ದಾಖಲಿಸಿತು. 295 ರನ್ ಗುರಿ ಹಿಂಬಾಲಿಸಿದ ರಾಬಿನ್ ಉತ್ತಪ್ಪ ನಾಯಕತ್ವದ ಕೇರಳ ತಂಡ 46.4 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲ್ ಔಟ್ ಆಯಿತು. 

ಕೆ.ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಜೋಡಿ ಅಮೋಘ ಬ್ಯಾಟಿಂಗ್ ಮಾಡಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 84 ರನ್ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. 51 ಎಸೆತಗಳಲ್ಲಿ ಎರಡು  ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ 50 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್   ಮಾಡುತ್ತಿದ್ದ ನಾಯಕ ಮನೀಶ್ ಪಾಂಡೆ ಅವರನ್ನು ಮನೋಹರನ್ ಔಟ್ ಮಾಡಿದರು. ಪವನ್ ದೇಶ್ ಪಾಂಡೆ (17 ರನ್), ಶ್ರೇಯಸ್ ಗೋಪಾಲ್ (31 ರನ್) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯುವಲ್ಲಿ ವಿಫಲರಾದರು.

ಆರಂಭದಿಂದಲೂ ಒಂದು ತುದಿಯಲ್ಲಿ ನೆಲೆ ನಿಂತ ಕೆ.ಎಲ್ ರಾಹುಲ್ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಗೆ ಕೈ ಬಿಟ್ಟಿರುವುದರಿಂದ ಬೇಸರದೊಂದಿಗ ಬ್ಯಾಟಿಂಗ್ ಮಾಡಿದ ರಾಹುಲ್, ನಿರೀಕ್ಷೆೆಯಂತೆ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 122 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ 131 ರನ್ ಸಿಡಿಸಿದರು. ಇವರು ಅಮೋಘ ಶತಕ ಸಿಡಿಸುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಸಂದೇಶ ಕಳುಹಿಸಿದರು. ರಾಹುಲ್ ಶತಕದ ಬಲದಿಂದ ಕರ್ನಾಟಕ ತಂಡ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಯಿತು. ಕೇರಳ ಪರ ಉತ್ತಮ ಬೌಲಿಂಗ್ ಮಾಡಿದ ಕೆ.ಎಂ. ಆಸಿಫ್ 

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 49.5 ಓವರ್ ಗಳಲ್ಲಿ 294/10 (ಕೆ.ಎಲ್ ರಾಹುಲ್ 131, ಮನೀಶ್ ಪಾಂಡೆ 50, ಶ್ರೇಯಸ್ ಗೋಪಾಲ್ 31; ಕೆ.ಎಂ ಆಸಿಫ್ 59 ಕ್ಕೆ 3, ಬಸಿಲ್ ತಂಪಿ 70 ಕ್ಕೆ 3)
ಕೇರಳ: 46.4 ಓವರ್ ಗಳಲ್ಲಿ 234/10 (ವಿಷ್ಣು ವಿನೋದ್ 104, ಸಂಜು ಸ್ಯಾಮ್ಸನ್ 67, ಸಚಿನ್ ಬೇಬಿ 26; ರೋನಿತ್ ಮೋರೆ 42 ಕ್ಕೆ 3, ಅಭಿಮನ್ಯು ಮಿಥುನ್ 32 ಕ್ಕೆ 2)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com