ಬ್ಯಾಟ್ಸಮನ್ ಗಳು ಈ ಉಪಾಯ ಮಾಡಿದ್ರೆ ಜಪ್ಪಯ್ಯ ಅಂದ್ರೂ ಬೌಲರ್ ಗಳು 'ಮಂಕಡ್ ರನೌಟ್' ಮಾಡಲು ಸಾಧ್ಯವೇ ಇಲ್ಲ!

'ಮಂಕಡ್ ರನೌಟ್' ವಿವಾದಕ್ಕೆ ಗಲ್ಲಿ ಕ್ರಿಕೆಟ್ ನಲ್ಲಿ ಭರ್ಜರಿ ಪರಿಹಾರ ದೊರೆತಿದ್ದು, ಬ್ಯಾಟ್ಸಮನ್ ಗಳು ಈ ಉಪಾಯ ಪಾಲಿಸಿದ್ದೇ ಆದರೆ ಜಪ್ಪಯ್ಯ ಅಂದ್ರೂ ಬೌಲರ್ ಗಳು 'ಮಂಕಡ್ ರನೌಟ್' ಮಾಡಲು ಸಾಧ್ಯವೇ ಇಲ್ಲ.. ಈ ವಿಡಿಯೋ ನೋಡಿದ್ರೆ ಬಿದಿ ಬಿದ್ದು ನಗ್ತೀರಾ...
ಮಂಕಡಿಂಗ್ ಗೆ ಗಲ್ಲಿ ಕ್ರಿಕೆಟ್ ನ ಉಪಾಯ
ಮಂಕಡಿಂಗ್ ಗೆ ಗಲ್ಲಿ ಕ್ರಿಕೆಟ್ ನ ಉಪಾಯ
ನವದೆಹಲಿ: ಜಾಗತಿಕವಾಗಿ ಭಾರಿ ಚರ್ಚೆಯಾಗುತ್ತಿರುವ 'ಮಂಕಡ್ ರನೌಟ್' ವಿವಾದಕ್ಕೆ ಗಲ್ಲಿ ಕ್ರಿಕೆಟ್ ನಲ್ಲಿ ಭರ್ಜರಿ ಪರಿಹಾರ ದೊರೆತಿದ್ದು,  ಬ್ಯಾಟ್ಸಮನ್ ಗಳು ಈ ಉಪಾಯ ಪಾಲಿಸಿದ್ದೇ ಆದರೆ ಜಪ್ಪಯ್ಯ ಅಂದ್ರೂ ಬೌಲರ್ ಗಳು 'ಮಂಕಡ್ ರನೌಟ್' ಮಾಡಲು ಸಾಧ್ಯವೇ ಇಲ್ಲ.. ಈ  ವಿಡಿಯೋ ನೋಡಿದ್ರೆ ಬಿದಿ ಬಿದ್ದು ನಗ್ತೀರಾ...
ಹೌದು.. ಈ ಹಿಂದೆ ಐಪಿಎಲ್ 2019 ಟೂರ್ನಿಯ ಆರಂಭದಲ್ಲಿ ಆರ್ ಅಶ್ವಿನ್ ಜಾಸ್ ಬಟ್ಲರ್ ರನ್ನು ಮಂಕಂಡ್ ರನೌಟ್ ಮಾಡುವ ಮೂಲಕ ವಿವಾದವೊಂದಕ್ಕೆ ನಾಂದಿ ಹಾಡಿದ್ದರು. ಬೌಲರ್ ಬಾಲ್ ಎಸೆಯುವುದಕ್ಕೆ ಮುನ್ನವೇ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ನಿಂತಿದ್ದ ಬಟ್ಲರ್ ಕ್ರೀಸ್ ಬಿಟ್ಟಿದ್ದರು. ಈ ವೇಳೆ ಅಶ್ವಿನ್ ಅವರನ್ನು ರನೌಟ್ ಮಾಡಿದ್ದರು. ಈ ವಿಚಾರ ಜಾಗತಿಕ ಕ್ರಿಕೆಟ್ ವಲಯದಲ್ಲಿ ಬಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಅಷ್ಟು ಮಾತ್ರವಲ್ಲದೇ ಇಂದಿಗೂ ಈ ಮಂಕಡ್ ರನೌಟ್ ಚರ್ಚೆ ಅಲ್ಲಲ್ಲಿ ಕೇಳಿ ಬರುತ್ತಿದ್ದು, ಐಸಿಸಿಗೂ ಗೊಂದಲ ಮೂಡಿಸಿರುವ ಈ ವಿವಾದಾತ್ಮಕ ನಡೆಗೆ ಭಾರತದ ಗಲ್ಲಿ ಕ್ರಿಕೆಟ್ ನಲ್ಲಿ ಭರ್ಜರಿ ಉಪಾಯ ದೊರೆತಿದೆ.
ವಿವಾದಿತ ಮಂಕಡಿಂಗ್​ ಗೆ ಗಲ್ಲಿ ಕ್ರಿಕೆಟ್ ನಲ್ಲಿ ಉಪಾಯ!
ವಿವಾದಿತ ಮಂಕಡಿಂಗ್​ ಪ್ರಕರಣ ಐಪಿಎಲ್​ನಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದ ನಂತರ ಕ್ರಿಕೆಟ್ ಭ್ರಾತೃತ್ವದಲ್ಲಿ ಸಣ್ಣ ಪ್ರಮಾಣದ ಬಿರುಕು ಉಂಟಾಗಿತ್ತು. ಮಂಕಂಡಿಗ್​ ಮಾಡಿದ ಕಿಂಗ್ಸ್​ ಇಲೆವೆನ್​ ಪಂಜಾಬ್​ ನಾಯಕ ಅಶ್ವಿನ್​ ನಡೆಯನ್ನು ಕೆಲವರು ಟೀಕಿಸಿದ್ದರು. ಅದೇ ರೀತಿ ಕೆಲವರು ಸರಿ ಎಂದಿದ್ದರು. ಈಗ ಮಂಕಡಿಂಗ್​ ಪ್ರಕರಣ ನಿವಾರಿಸುವ ಸಲಹೆಯೊಂದನ್ನು ಗಲ್ಲಿ ಕ್ರಿಕೆಟಿಗರು ಹೊತ್ತು ತಂದಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ.
ಗ್ರೇ ನಿಕೋಲ್​ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್​ ಆಗಿದ್ದು, ವಿಡಿಯೋದಲ್ಲಿ ನಾನ್​ ಸ್ಟ್ರೈಕರ್​ ವಿಭಾಗದಲ್ಲಿ ನಿಂತಿರುವ ಆಟಗಾರ ತೆಂಗಿನ ಗರಿಯ ಸಹಾಯದಿಂದ ರನ್​ ಕದಿಯುತ್ತಾನೆ. ಆತ ಬೌಲರ್ ಬಾಲ್ ಎಸೆಯುವ ಮುನ್ನವೇ ಕ್ರೀಸ್ ಬಿಟ್ಟಿದ್ದರೂ ಬೌಲರ್ ಗೆ ಮಂಕಡ್ ರನೌಟ್ ಅವಕಾಶವೇ ದೊರೆಯುವುದಿಲ್ಲ. ಕಾರಣ ಆತ ಹಿಡಿದಿದ್ದ ತೆಂಗಿನ ಗರಿ ಭಾರಿ ಉದ್ದವಿದ್ದ ಕಾರಣ ಆತ ಅದನ್ನು ಕ್ರೀಸ್ ನೊಳಗೆ ಇಟ್ಟಿದ್ದ. ಇನ್ನು ರನ್ ಕದಿಯುವಾಗಲೂ ಆತ ಶ್ರಮವೇ ಇಲ್ಲದೇ ಒಂದು ಹೆಜ್ಜೆಯನ್ನೂ ಕೂಡ ಮುಂದೆ ಹಾಕದೇ ಅದೇ ತೆಂಗಿನ ಗರಿಯ ಸಹಾಯದಿಂದ ಮೂರು ರನ್ ಕದಿಯುತ್ತಾನೆ.  ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಮಂಕಡಿಂಗೂ ಈ ಮೂಲಕ ಬಹುಶಃ ಉತ್ತರ ದೊರೆಯಬಹುದು ಎಂದು ಹಾಸ್ಯಾತ್ಮಕವಾಗಿ ಬರೆಯಲಾಗಿದೆ.
ಬ್ಯಾಟ್ಸಮನ್ ಗಳು ಇಂತಹ ಚಾಣಾಕ್ಷ ಉಪಾಯ ಬಳಿಸಿದ್ದೇ ಆದರೆ ಮಂಕಡಿಂಗ್​ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಟ್ವಿಟರ್​​ನಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ. ಈ ಹಾಸ್ಯಾತ್ಮಕ ವಿಡಿಯೋ ವ್ಯಾಪಕ ಶೇರ್ ಕೂಡ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com