ಪ್ರತಿ ಪಂದ್ಯವನ್ನು ಟೀಂ ಇಂಡಿಯಾವನ್ನು ಹೆದರಿಸುವಂತೆ ಆಡುತ್ತೇವೆ: ಪಾಕ್ ನಾಯಕ ಸರ್ಫರಾಜ್ ಎಚ್ಚರಿಕೆ!

ವಿಶ್ವಕಪ್ ಕ್ರಿಕೆಟ್ ಮಹಾಸಮರಕ್ಕೆ ದಿನಗಣನೆ ಶುರುವಾಗಿದ್ದು ಈ ಮಧ್ಯೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್ ಪಂದ್ಯಾವಳಿಯಲ್ಲಿ ಪ್ರತಿ ಪಂದ್ಯವನ್ನು ಟೀಂ ಇಂಡಿಯಾವನ್ನು ಹೆದರಿಸುವಂತೆ ಆಡುತ್ತೇವೆ...

Published: 23rd April 2019 12:00 PM  |   Last Updated: 23rd April 2019 10:42 AM   |  A+A-


ವಿರಾಟ್ ಕೊಹ್ಲಿ-ಸರ್ಫರಾಜ್ ಅಹ್ಮದ್

Posted By : VS VS
Source : Online Desk
ಇಸ್ಲಾಮಾಬಾದ್: ವಿಶ್ವಕಪ್ ಕ್ರಿಕೆಟ್ ಮಹಾಸಮರಕ್ಕೆ ದಿನಗಣನೆ ಶುರುವಾಗಿದ್ದು ಈ ಮಧ್ಯೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್ ಪಂದ್ಯಾವಳಿಯಲ್ಲಿ ಪ್ರತಿ ಪಂದ್ಯವನ್ನು ಟೀಂ ಇಂಡಿಯಾವನ್ನು ಹೆದರಿಸುವಂತೆ ಆಡುತ್ತೇವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪುಲ್ವಾಮಾ ದಾಳಿ ಬಳಿಕ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಜೊತೆ ಆಡಬೇಕೋ ಅಥವಾ ಬೇಡವೋ ಎಂದು ಭಾರತ ಗೊಂದಲದಲ್ಲಿರುವಾಗಲೇ ಪಾಕ್ ನಾಯಕ ಅಹ್ಮದ್ ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪಂದ್ಯಾವಳಿಯಲ್ಲಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು ಎಂದು ನಾಯಕನಾಗಿ ಬಯಸುತ್ತೇನೆ. ಅದಕ್ಕೆ ಸಾಂಪ್ರದಾಯಿಕ ಎದುರಾಳಿ ಭಾರತವೂ ಹೊರತಲ್ಲ. ನಾವು ಆಫ್ಗಾನಿಸ್ತಾನ ತಂಡವನ್ನು ಭಾವಿಸಿದಂತೆ ಭಾರತ ತಂಡವನ್ನು ಭಾವಿಸಿ ಆಡುತ್ತೇವೆ.  

ವಿಶ್ವಕಪ್ ನಲ್ಲಿ ಇಲ್ಲಿಯವರೆಗೂ ಭಾರತವನ್ನು ಸೋಲಿಸಿಲ್ಲ ಎಂಬುದಕ್ಕೆ ಉತ್ತರಿಸಿದ ಅವರು ಇದುವರೆಗೂ ಸೋಲಿಸಿಲ್ಲ ಆದರೆ ಇತ್ತೀಚೆಗೆ ಚಾಂಪಿಯನ್ ಟ್ರೋಫಿಯಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿದ್ದನ್ನು ಮರೆಯಬಾರದು ಎಂದು ಹೇಳಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp