ಅಂತಿಮ ಟಿ-20 ಪಂದ್ಯಕ್ಕೆ ಬದಲಾವಣೆ: ಮೊದಲ 2 ಪಂದ್ಯಗಳಲ್ಲಿ ಆಡದಿದ್ದವರಿಗೆ ಅವಕಾಶ

ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿ ಕೈ ವಶಪಡಿಸಿಕೊಂಡಿದ್ದರೂ ಅಂತಿಮ ಪಂದ್ಯಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಾಡೆರ್ ಹಿಲ್ : ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿ ಕೈ ವಶಪಡಿಸಿಕೊಂಡಿದ್ದರೂ ಅಂತಿಮ ಪಂದ್ಯಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. 
ಭಾನುವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತ 22 ರನ್ ಗಳಿಂದ ಗೆಲುವು ಸಾಧಿಸಿತ್ತು. ಆಟಗಾರರ ಆದ್ಬುತ ಪ್ರದರ್ಶನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೊಹ್ಲಿ, ಮೊದಲ ಎರಡು ಪಂದ್ಯಗಳಲ್ಲಿ ಅವಕಾಶ ದೊರೆಯದೆ ಇರುವವರಿಗೆ ಅಂತಿಮ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. 
ಗೆಲುವಿಗೆ ಯಾವಾಗಾಲೂ ಆದ್ಯತೆ ನೀಡಲಾಗುತ್ತದೆ. ಆದರೆ, ಉಳಿದ ಕೆಲ ಆಟಗಾರರಿಗೂ ಅವಕಾಶ ನೀಡಬೇಕಾಗಿದೆ. ಮೊದಲು ಗೆಲ್ಲಬೇಕೆಂಬ ಚಿಂತೆ ಯಾವಾಗಲು ಇರುತ್ತದೆ. ಆದರೆ, ಮೊದಲ ಎರಡು ಪಂದ್ಯಗಳ ಗೆಲುವು ನಮ್ಮಗೆ ರಕ್ಷಣೆ ನೀಡಲಿದೆ ಎಂದು ಪಂದ್ಯ ಮುಗಿದ ಬಳಿಕ ಕೊಹ್ಲಿ ಹೇಳಿದರು.
ನಾಳಿನ ಮೂರನೇ ಟಿ-20 ಪಂದ್ಯಕ್ಕಾಗಿ ಟೀಂ ಇಂಡಿಯಾ ಗಾಯಾನಾಕ್ಕೆ ಪ್ರಯಾಣ ಬೆಳೆಸಲಿದೆ. ಮೂರನೇ ಪಂದ್ಯದಲ್ಲಿ ಶ್ರೇಯಸ್ಸು ಅಯ್ಯರ್, ಲೆಗ್ ಬ್ರೇಕ್ ಬೌಲರ್ ರಾಹುಲ್ ಚಾಹರ್ ಅವಕಾಶ ಪಡೆಯಲಿದ್ದಾರೆ. ರಾಹುಲ್ ಸಂಬಂಧಿ ದೀಪಕ್ ಚಾಹರ್  ಹನ್ನೊಂದರ ತಂಡದಲ್ಲಿ ಸ್ಥಾನ ಪಡೆದರೂ ಅಚ್ಟರಿ ಇಲ್ಲ.
ಮೊದಲ ಹಾಗೂ ಎರಡನೇ ಪಂದ್ಯದಲ್ಲಿ ಕ್ರಮವಾಗಿ 4, 0 ರನ್ ಗಳಿಸಿದ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯೂ ಇದೆ. ಒಂದು ವೇಳೆ ರಿಷಬ್ ಪಂತ್ ಅವರನ್ನು ಆಡಿಸದಿದ್ದರೆ ಕೆಎಲ್ ರಾಹುಲ್  ಆ ಸ್ಥಾನದಲ್ಲಿ ಆಡಲಿದ್ದಾರೆ. 
ಎರಡನೇ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ, ಮೊದಲು ಬ್ಯಾಟ್ ಮಾಡಲು ಪಿಚ್ ಉತ್ತಮವಾಗಿತ್ತು, ಹೊಸ ಬಾಲು ಚೆನ್ನಾಗಿ ಬರುತಿತ್ತು. ಉತ್ತಮ ವಾತವಾರಣ ರೂಪಿಸಿಕೊಂಡೆವು. ಜಡೇಜಾ ಹಾಗೂ ಕೃಣಾಲ್  ಉತ್ತಮ ರೀತಿಯಲ್ಲಿ ಪಂದ್ಯವನ್ನು ಫಿನಿಶ್ ಮಾಡಿದರು ಎಂದರು.
 ಸ್ಪೀನರ್ ವಾಷ್ಟಿಂಗ್ಟನ್ ಸುಂದರ್ ಬಗ್ಗೆಯೂ ಗುಣಗಾನ ಮಾಡಿದ ಕೊಹ್ಲಿ, ಎರಡು ಪಂದ್ಯಗಳಲ್ಲಿಯೂ ಸುಂದರ್ ಯಶಸ್ವಿಯಾಗಿ ಬೌಲಿಂಗ್ ಮಾಡಿದ್ದಾರೆ.  ನಮ್ಮ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡದ್ದಾರೆ ಎಂದು ಹೇಳಿದರು. 
ಪಂದ್ಯ ಮುಂದುವರೆದಿದ್ದರೆ ಗೆಲುವು ಸಾಧಿಸುತ್ತಿದ್ದಾಗಿ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಕಾರ್ಲೋಸ್ ಬ್ರಾಥ್ ವೈಟ್ ಹೇಳಿದರು. ಟೀಂ ಇಂಡಿಯಾ ನೀಡಿದ  168 ರನ್ ಗಳ ಸವಾಲು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ 15.3 ಓವರ್ ಗಳಲ್ಲಿ 98 ರನ್ ಗಳಿಸಿದಾಗ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸುವ ಮೂಲಕ  ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತ ಗೆಲುವನ್ನು ತನ್ನದಾಗಿಸಿಕೊಂಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com