ಕೊಹ್ಲಿ ಕೇವಲ 19 ರನ್ ಹೊಡೆದ್ರೆ 26 ವರ್ಷದ, ಪಾಕ್ ಮಾಜಿ ಕ್ರಿಕೆಟಿಗನ ದಾಖಲೆ ಧೂಳಿಪಟ!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಮಹತ್ವದ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಕೇವಲ 19 ರನ್ ಸಿಡಿಸಿದರೆ 26 ವರ್ಷದ ಹಳೆಯ ದಾಖಲೆ ಧೂಳಪಟವಾಗಲಿದೆ.
Published: 11th August 2019 02:33 PM | Last Updated: 11th August 2019 02:33 PM | A+A A-

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಮಹತ್ವದ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಕೇವಲ 19 ರನ್ ಸಿಡಿಸಿದರೆ 26 ವರ್ಷದ ಹಳೆಯ ದಾಖಲೆ ಧೂಳಪಟವಾಗಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಇಂದು ಎರಡನೇ ಏಕದಿನ ಪಂದ್ಯವನ್ನಾಡಳಿದ್ದು ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ 1912 ರನ್ ಪೇರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 19 ರನ್ ಸಿಡಿಸಿದರೆ ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ದಾಖಲೆ ಮುರಿಯಲಿದ್ದಾರೆ.
ಜಾವೇದ್ ಮಿಯಾಂದಾದ್ ವಿಂಡೀಸ್ ವಿರುದ್ಧ 1930 ರನ್ ಬಾರಿಸಿದ್ದಾರೆ. ಇದಕ್ಕಾಗಿ ಜಾವೇದ್ 64 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಕೊಹ್ಲಿ 34ನೇ ಇನ್ನಿಂಗ್ಸ್ ನಲ್ಲಿ ದಾಖಲೆ ನಿರ್ಮಿಸುವ ಅವಕಾಶ ಪಡೆಯಲಿದ್ದಾರೆ.
ವಿರಾಟ್ ಕೊಹ್ಲಿ ವಿಂಡೀಸ್ 7 ಶತಕ, 10 ಅರ್ಧ ಶತಕ ಸಿಡಿಸಿದ್ದಾರೆ. ಆದರೆ ಮಿಯಾಂದಾದ್ 1 ಶತಕ ಮಾತ್ರ ಸಿಡಿಸಿದ್ದರು.