ಸೌರವ್ ಗಂಗೂಲಿ
ಸೌರವ್ ಗಂಗೂಲಿ

ತನ್ನ ದಾಖಲೆ ಮುರಿದ ವಿರಾಟ್‌ ಕೊಹ್ಲಿಯನ್ನು ಮಾಸ್ಟರ್‌ ಕ್ಲಾಸ್‌ ಬ್ಯಾಟ್ಸ್‌ಮನ್‌ ಎಂದು ಹಾಡಿ ಹೊಗಳಿದ ದಾದಾ

ನಾಯಕ ವಿರಾಟ್‌ ಕೊಹ್ಲಿ ಅವರ ಶತಕದ ನೆರವಿನಿಂದ ಮಳೆಯ ನಡುವೆಯೂ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 59 ರನ್‌ಗಳಿಂದ ಜಯ(ಡಿಎಲ್‌ಎಸ್‌ ನಿಯಮ) ಸಾಧಿಸಿತು.

ಪೋರ್ಟ್‌ ಆಫ್‌ ಸ್ಪೈನ್‌: ನಾಯಕ ವಿರಾಟ್‌ ಕೊಹ್ಲಿ ಅವರ ಶತಕದ ನೆರವಿನಿಂದ ಮಳೆಯ ನಡುವೆಯೂ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 59 ರನ್‌ಗಳಿಂದ ಜಯ(ಡಿಎಲ್‌ಎಸ್‌ ನಿಯಮ) ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆ ಪಡೆಯಿತು. 
 
ಭಾನುವಾರ ವಿರಾಟ್‌ ಕೊಹ್ಲಿ ವೃತ್ತಿ ಜೀವನದ 42ನೇ ಶತಕ ಬಾರಿಸಿದರು. ಅಲ್ಲದೇ, ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 11, 363 ರನ್‌ ಗಳಿಸಿದ್ದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರನ್ನು ಕಿಂಗ್‌ ಕೊಹ್ಲಿ ಹಿಂದಿಕ್ಕಿದ್ದರು. 

30ರ ಪ್ರಾಯದ ಕೊಹ್ಲಿ 238 ಪಂದ್ಯಗಳಲ್ಲಿ 59.91 ಸರಾಸರಿಯಲ್ಲಿ 11,406 ರನ್‌ ಗಳಿಸಿದ್ದಾರೆ. ಆ ಮೂಲಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಸದ್ಯ ಎಂಟನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರು 463 ಪಂದ್ಯಗಳಿಂದ 18,426 ರನ್‌ ಗಳಿಸಿ ಅಗ್ರ ಸ್ಥಾನದಲ್ಲಿ ಉಳಿದಿದ್ದಾರೆ. 

ಸೌರವ್‌ ಗಂಗೂಲಿ ದಾಖಲೆ ಮುರಿಯುತ್ತಿದ್ದಂತೆ ಟ್ವೀಟ್‌ ಮಾಡಿದ ದಾದಾ "ವಿರಾಟ್‌ ಕೊಹ್ಲಿ ಏಕದಿನ ಮಾದರಿಯಲ್ಲಿ ಮತ್ತೊಬ್ಬ ಮಾಸ್ಟರ್‌ ಕ್ಲಾಸ್‌ ಬ್ಯಾಟ್ಸ್‌ಮನ್‌...ಎಂಥಾ ಆಟಗಾರ." ಎಂದು ಶ್ಲಾಘಿಸಿದ್ದಾರೆ. 

120 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ ತಮ್ಮ ಖಾತೆಗೆ ಸೇರಿಸಿಕೊಂಡರು. ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಮಾದರಿಯಲ್ಲಿ 2,000 ರನ್‌ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆ ಮಾಡಿದರು. ಇದಕ್ಕೂ ಮುನ್ನ ಜಾವೇದ್ ಮಿಯಾಂದಾದ್ ಅವರು ವಿಂಡೀಸ್‌ ವಿರುದ್ಧ 1, 930 ರನ್‌ ಗಳಿಸಿದ್ದರು. ಈ ಸಾಧನೆ ಮಾಡಲು ಕೊಹ್ಲಿ 34 ಇನಿಂಗ್ಸ್ ತೆಗೆದುಕೊಂಡಿದ್ದರು. 

ನಾಯಕ ವಿರಾಟ್‌ ಕೊಹ್ಲಿ ಭಾನುವಾರ ಸಿಡಿಸಿದ ವೆಸ್ಟ್‌ ಇಂಡೀಸ್‌ ವಿರುದ್ಧ ಎಂಟನೇ ಶತಕ ಪೂರೈಸಿದ್ದರು. ಇನ್ನುಳಿದಂತೆ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಎರಡೂ ತಂಡಗಳ ವಿರುದ್ಧವೂ ತಲಾ ಎಂಡು ಶತಕ ಸಿಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com