ಒಬ್ಬ ಬೌಲರ್‌ಗಾಗಿ ರೋಹಿತ್ ಅಥವಾ ಅಜಿಂಕ್ಯರನ್ನು ಕೈಬಿಡ್ತಾರಾ ನಾಯಕ ಕೊಹ್ಲಿ!
ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಆರಂಭಗೊಳ್ಳಲಿದ್ದು 11ರ ಬಳಗದಲ್ಲಿ ಯಾರನ್ನು ಆಡಿಸಬೇಕು ಎಂಬುದೇ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ಚಿಂತೆಯಾಗಿದೆ. ಇನ್ನು ಒಬ್ಬ ಹೆಚ್ಚುವರಿ...
Published: 21st August 2019 03:17 PM | Last Updated: 21st August 2019 03:19 PM | A+A A-

ಅಜಿಂಕ್ಯ ರಹಾನೆ-ವಿರಾಟ್ ಕೊಹ್ಲಿ
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಆರಂಭಗೊಳ್ಳಲಿದ್ದು 11ರ ಬಳಗದಲ್ಲಿ ಯಾರನ್ನು ಆಡಿಸಬೇಕು ಎಂಬುದೇ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ಚಿಂತೆಯಾಗಿದೆ. ಇನ್ನು ಒಬ್ಬ ಹೆಚ್ಚುವರಿ ಬೌಲರ್‌ಗಾಗಿ ಉಪ ನಾಯಕ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆಯನ್ನು ಕೈಬಿಡುತ್ತಾರಾ ಎಂದು ನೋಡಬೇಕಿದೆ.
ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್ ಗಳು ಹಾಗೂ ಬ್ಯಾಟ್ಸ್ ಮನ್ ಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ಬೌಲರ್ ಬೇಕೋ ಅಥವಾ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಬೇಕೋ ಎಂಬ ಪ್ರಶ್ನೆ ನಾಯಕ ವಿರಾಟ್ ಕೊಹ್ಲಿಗೆ ಎದುರಾಗಿದೆ.
ಟೀಂ ಇಂಡಿಯಾದ ವೇಗಿಗಳಾದ ಜಸ್ ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಅಥವಾ ಮೊಹಮ್ಮದ್ ಶಮಿ ಈ ನಾಲ್ವರಲ್ಲಿ ಮೂವರು ವೇಗಿಗಳು ಕಣಕ್ಕಿಳಿಯುವುದು ಪಕ್ಕ. ಇನ್ನು ಸ್ಪಿನ್ನರ್ ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ಆಡಬಹುದು. ಹೀಗಾದಲ್ಲಿ ರೋಹಿತ್ ಶರ್ಮಾ ಅಥವಾ ಅಜಿಂಕ್ಯ ರಹಾನೆ ಪೈಕಿ ಒಬ್ಬರು ಮಾತ್ರ ಆಡಬಹುದಾಗಿದೆ.
ಇನ್ನು ವಿರಾಟ್ ಕೊಹ್ಲಿ ಐವರು ಬೌಲರ್ ಗಳನ್ನು ಆಡಿಸಲು ತೀರ್ಮಾನಿಸಿದರೆ ಆಗ ಅಂಜಿಕ್ಯ ರಹಾನೆಯನ್ನು ಕೈಬಿಟ್ಟು ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗುತ್ತದೆ.
ಟೆಸ್ಟ್ ಪಂದ್ಯದ ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ, ಮಾಯಾಂಕ್ ಅಗರವಾಲ್, ವಿರಾಟ್ ಕೊಹ್ಲಿ(ನಾಯಕ), ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಬ್ ಪಂತ್(ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ ಪ್ರೀತ್ ಬುಮ್ರಾ.