ವಿಂಡೀಸ್ ವಿರುದ್ಧ ಭರ್ಜರಿ ಶತಕ, ಈ ದಾಖಲೆ ಬರೆದ ಏಕೈಕ ಆಟಗಾರ ಹಿಟ್ ಮ್ಯಾನ್ ರೋಹಿತ್!

ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಶಾಖಪಟ್ಟಣಂ: ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.

ಹೌದು.. ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. ಕೇವಲ 138 ಎಸೆತಗಳಲ್ಲಿ 159 ರನ್ ಗಳಿಸಿದ ರೋಹಿತ್ ಈ ಮೂಲಕ ಅಪರೂಪದ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಅವರ ಈ ಭರ್ಜರಿ ಆಟದಲ್ಲಿ ಐದು ಸಿಕ್ಸರ್ ಮತ್ತು 17 ಬೌಂಡರಿಗಳಿದ್ದವು.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು 150ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಒಟ್ಟು  220 ಏಕದಿನ ಪಂದ್ಯವನ್ನಾಡಿರುವ ರೋಹಿತ್ ಶರ್ಮಾ 28 ಶತಕ ಸಿಡಿಸಿದ್ದಾರೆ. ಅಂತೆಯೇ 8 ಬಾರಿ 150ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಇನ್ನು ರೋಹಿತ್ ಶರ್ಮಾ ಬಳಿಕದ ಸ್ಥಾನದಲ್ಲಿ ಆಸಿಸ್ ನ ಡೇವಿಡ್ ವಾರ್ನರ್ ಇದ್ದು, ವಾರ್ನರ್ 6 ಬಾರಿ ಈ ಸಾಧನೆ ಗೈದಿದ್ದಾರೆ. ಅಂತೆಯೇ ಭಾರತ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ ನ ಕ್ರಿಸ್ ಗೇಯ್ಲ್ ಜಂಟಿ ಮೂರನೇ ಸ್ಥಾನದಲ್ಲಿದ್ದು ಇಬ್ಬರೂ ತಲಾ ಐದು ಬಾರಿ ಈ ಸಾಧನೆ ಗೈದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com