ದಾಖಲೆಯ ಪಂದ್ಯದಲ್ಲಿ ಗೋಲ್ಡನ್ ಡಕ್ ಗೆ ಬಲಿಯಾದ ಕೊಹ್ಲಿ, ಇಷ್ಟಕ್ಕೂ ಆ ದಾಖಲೆ ಯಾವುದು ಗೊತ್ತಾ?

ವಿಶಾಖಪಟ್ಟಣಂನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಸರಣಿಯಲ್ಲಿ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ಈ ಪಂದ್ಯ ಅತ್ಯಂತ ಮಹತ್ವದ ಪಂದ್ಯವಾಗಿದ್ದು, ಇದೇ ಪಂದ್ಯದಲ್ಲಿ ಕೊಹ್ಲಿ ಗೋಲ್ಟನ್ ಡಕ್ ಗೆ ಬಲಿಯಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಸರಣಿಯಲ್ಲಿ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅಂತೆಯೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ಈ ಪಂದ್ಯ ಅತ್ಯಂತ ಮಹತ್ವದ ಪಂದ್ಯವಾಗಿದ್ದು, ಇದೇ ಪಂದ್ಯದಲ್ಲಿ ಕೊಹ್ಲಿ ಗೋಲ್ಟನ್ ಡಕ್ ಗೆ ಬಲಿಯಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ್ದಾರೆ.

ಹೌದು.. ಇಂದು ವಿಶಾಖಪಟ್ಟಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ಮೂಲಕ ಟೀಂ ಇಂಡಿಯಾ ನಾಯಕ ತಮ್ಮ ವೃತ್ತಿ ಜೀವನದ 400ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದು, ಆ ಮೂಲಕ ಈ ಅಪರೂರ್ವ ಸಾಧನೆ ಮಾಡಿದ ಭಾರತದ 8ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

2008ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಅಲ್ಲಿಂದ ಇಲ್ಲಿಯವರೆಗೂ 400 (ಏಕದಿನ, ಟಿ20 ಮತ್ತು ಟೆಸ್ಟ್) ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಕೊಹ್ಲಿ ಈ ವರೆಗೂ 241 ಏಕದಿನ ಪಂದ್ಯ, 84 ಟೆಸ್ಟ್ ಪಂದ್ಯ ಮತ್ತು 75 ಟಿ20 ಪಂದ್ಯಗಳನ್ನಾಡಿದ್ದಾರೆ. ಆ ಮೂಲಕ ಭಾರತದ ಪರ ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದಾರೆ. 

ಅಂತೆಯೇ ಇಷ್ಟು ಪಂದ್ಯಗಳನ್ನಾಡಿದ ವಿಶ್ವದ 33ನೇ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ. ವಿಶ್ವಕ್ರಿಕೆಟಿಗರ ಪಟ್ಟಿಯಲ್ಲೂ ಭಾರತದ ಸವ್ಯ ಸಾಚಿ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ. ಬಳಿಕ ಮಹೇಲಾ ಜಯವರ್ಧನೆ (652 ಪಂದ್ಯಗಳು), ಕುಮಾರ್ ಸಂಗಕ್ಕಾರ (594 ಪಂದ್ಯಗಳು), ಸನತ್ ಜಯಸೂರ್ಯ (586 ಪಂದ್ಯಗಳು) ಮತ್ತು ರಿಕಿ ಪಾಂಟಿಂಗ್ (560 ಪಂದ್ಯಗಳು)ಸ್ಥಾನದಲ್ಲಿದ್ದಾರೆ.

ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ (664 ಪಂದ್ಯಗಳು), ಎಂಎಸ್ ಧೋನಿ (538 ಪಂದ್ಯಗಳು) ರಾಹುಲ್ ದ್ರಾವಿಡ್ (509 ಪಂದ್ಯಗಳು) ಮೊಹಮದ್ ಅಜರುದ್ದೀನ್ (433 ಪಂದ್ಯಗಳು)ಸೌರವ್ ಗಂಗೂಲಿ (424 ಪಂದ್ಯಗಳು), ಅನಿಲ್ ಕುಂಬ್ಳೆ (403ಪಂದ್ಯಗಳು) ಮತ್ತು ಯುವರಾಜ್ ಸಿಂಗ್ (402ಪಂದ್ಯಗಳು) 400ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರಾಗಿದ್ದಾರೆ.

ಗೋಲ್ಡನ್ ಡಕ್ ಗೆ ಬಲಿಯಾದ ಕೊಹ್ಲಿ

ಇನ್ನು ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಬಲಿಯಾಗಿದ್ದು, ಕೆಎಲ್ ರಾಹುಲ್ ಔಟಾಗುತ್ತಿದ್ದಂತೆಯೇ ಕ್ರೀಸ್ ಗೆ ಬಂದ ಕೊಹ್ಲಿಗೆ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಆಘಾತ ನೀಡಿದರು. ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಮ್ಯಾಜಿಕ್ ಮಾಡಿದ ಪೊಲಾರ್ಡ್ ಕೊಹ್ಲಿಯನ್ನು ಗೋಲ್ಡನ್ ಡಕೌಟ್ ಮಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com