ಟೀಮ್ ಇಂಡಿಯಾಗೆ ಕಾಡುತ್ತಿದೆ ಭಾನುವಾರದ ಭಯ!

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಟೀಮ್ ಇಂಡಿಯಾ, ಮೂರನೇ ಪಂದ್ಯದತ್ತ ಚಿತ್ತ ನೆಟ್ಟಿದೆ. 
ಟೀಮ್ ಇಂಡಿಯಾ
ಟೀಮ್ ಇಂಡಿಯಾ

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಟೀಮ್ ಇಂಡಿಯಾ, ಮೂರನೇ ಪಂದ್ಯದತ್ತ ಚಿತ್ತ ನೆಟ್ಟಿದೆ. 

ಭಾನುವಾರ ಕಟಕ್‌ನ ಬರಾಬತಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ಆಡಲು ಸಜ್ಜಾಗಿದೆ. ಆದರೆ ಈ ವರ್ಷದ ಭಾನುವಾರ ಟೀಮ್ ಇಂಡಿಯಾ ಪಾಲಿಗೆ ಕಹಿಯನ್ನೇ ಹೆಚ್ಚಾಗಿ ಉಣಬಡಿಸಿದೆ. 
  
ಈ ವರ್ಷ ಭಾನುವಾರ ಭಾರತಕ್ಕೆ ನಿರಾಸೆ ತಂದಿದ್ದು, ಅನೇಕ ಪಂದ್ಯಗಳಲ್ಲಿ ಸೋತಿದೆ. ಈ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ಚೆನ್ನೈನಲ್ಲಿ ನಡೆದಿದ್ದು, ಇದರಲ್ಲಿ ಭಾರತ ತಂಡವು ಎಂಟು ವಿಕೆಟ್‌ಗಳ ಸೋಲನ್ನು ಕಂಡಿತ್ತು. ಸರಣಿಯ ನಿರ್ಣಾಯಕ ಪಂದ್ಯವು ಭಾನುವಾರವೇ ನಡೆಯಲಿದ್ದು, ಸರಣಿಯನ್ನು ಗೆಲ್ಲಲು ಭಾರತ ತಂಡವು ಪುಟಿದೇಳುವ ಅವಶ್ಯಕತೆ ಇದೆ. 
  
ಭಾರತ ಈ ವರ್ಷ 27 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾನುವಾರ ಮೂರು ಏಕದಿನ ಪಂದ್ಯಗಳನ್ನು ಸೋತಿದೆ. ಈ ವರ್ಷದ ಮಾರ್ಚ್ 10 ರಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕು ವಿಕೆಟ್ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ನಲ್ಲೂ ಟೀಮ್ ಇಂಡಿಯಾ ಆತಿಥೇಯ ತಂಡದ ವಿರುದ್ಧ ಬರ್ಮಿಂಗ್ ಹ್ಯಾಮ್ನಲ್ಲಿ ಭಾನುವಾರವೇ ಸೋಲನ್ನು ಅನುಭವಿಸಿತ್ತು.
  
ನಂತರ ಡಿಸೆಂಬರ್ 15 ರ ಭಾನುವಾರ ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಎಂಟು ವಿಕೆಟ್ ಸೋಲು ಅನುಭವಿಸಿತು. ಆದರೆ, ಡಿಸೆಂಬರ್ 18 ರ ಬುಧವಾರ ವಿಶಾಖಪಟ್ಟಣಂನಲ್ಲಿ ನಡೆದ ಸರಣಿಯಲ್ಲಿ ಭಾರತ ಸಮಬಲ ಸಾಧಿಸಿದೆ, ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಲೋಕೇಶ್ ರಾಹುಲ್ ಅವರ ಶತಕ ಮತ್ತು ಕುಲದೀಪ್ ಯಾದವ್ ಅವರ ಹ್ಯಾಟ್ರಿಕ್. ಈಗ ಸರಣಿಯ ನಿರ್ಣಾಯಕ ಪಂದ್ಯವನ್ನು ಭಾನುವಾರ ಕಟಕ್‌ನಲ್ಲಿ ಆಡಬೇಕಿದೆ.
  
ಈ ವರ್ಷದಲ್ಲಿ ಭಾರತ 16 ಟಿ-20 ಪಂದ್ಯ ಆಡಿದ್ದು, ಅದರಲ್ಲಿ ಭಾನುವಾರ ನಡೆದ ಐದು ಪಂದ್ಯ ಸೋತಿದೆ. ಫೆಬ್ರವರಿ 8 ರ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ, ಫೆಬ್ರವರಿ 24 ರಂದು ಆಸ್ಟ್ರೇಲಿಯಾ ವಿರುದ್ಧ, ಸೆಪ್ಟೆಂಬರ್ 22 ದಕ್ಷಿಣ ಆಫ್ರಿಕಾ ವಿರುದ್ಧ, ದೆಹಲಿಯಲ್ಲಿ ನವೆಂಬರ್ 3 ರ ಭಾನುವಾರ ಬಾಂಗ್ಲಾದೇಶ ವಿರುದ್ಧ, ಡಿಸೆಂಬರ್ 8 ರ ಭಾನುವಾರ ತಿರುವನಂತಪುರಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದೆ. 
  
ಟಿ-20 ಯಲ್ಲಿ ಭಾರತ ಈ ವರ್ಷ ಏಳು ಪಂದ್ಯ ಸೋತಿದ್ದು, ಅದರಲ್ಲಿ ಐದು ಪಂದ್ಯಗಳು ಭಾನುವಾರ ಸೋತಿದೆ. ವೆಸ್ಟ್ ಇಂಡೀಸ್‌ನಿಂದ ಏಕದಿನ ಸರಣಿಯನ್ನು ಗೆಲ್ಲಲು ಭಾರತ ಭಾನುವಾರ ಕಟಕ್‌ನಲ್ಲಿ ಶ್ರಮಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com