ಗಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಅತೀ ರೋಚಕ: 1 ಎಸೆತದಲ್ಲಿ 6 ರನ್ ಬೇಕಿತ್ತು, ಆದ್ರೆ ಸಿಕ್ಸರ್ ಬಾರಿಸದೆ ಪಂದ್ಯ ಗೆಲುವು!

ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅದ್ಭುತ ಗೆಲುವು ಸಾಧಿಸಿರುವ ಘಟನೆಗಳು ವರದಿಯಾಗಿದೆ. ಇನ್ನು ಕೊನೆಯ ಎಸೆತದಲ್ಲಿ 6 ರನ್ ಬೇಕಿದ್ದಾಗ ಆ 1 ಎಸೆತ ಪೂರ್ಣಗೊಳ್ಳದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅದ್ಭುತ ಗೆಲುವು ಸಾಧಿಸಿರುವ ಘಟನೆಗಳು ವರದಿಯಾಗಿದೆ. ಇನ್ನು ಕೊನೆಯ ಎಸೆತದಲ್ಲಿ 6 ರನ್ ಬೇಕಿದ್ದಾಗ 1 ಎಸೆತ ಪೂರ್ಣಗೊಳ್ಳದೆ ಪಂದ್ಯ ಗೆದ್ದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 
ಮಹಾರಾಷ್ಟ್ರದಲ್ಲಿ ನಡೆದ 2019ರ ಆದರ್ಶ್ ಕ್ರಿಕೆಟ್ ಕ್ಲಬ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದ್ದು, ಬ್ಯಾಟಿಂಗ್ ಮಾಡುತ್ತಿದ್ದ ತಂಡಕ್ಕೆ 1 ಎಸೆತದಲ್ಲಿ 6 ರನ್ ಬೇಕಿತ್ತು. ಈ ವೇಳೆ ಎದುರಾಳಿ ತಂಡದ ಬೌಲರ್ ಸತತ ಆರು ವೈಡ್ ಬಾಲ್ ಮಾಡಿದ್ದರ ಪರಿಣಾಮ ಬ್ಯಾಟಿಂಗ್ ಮಾಡುತ್ತಿದ್ದ ತಂಡ ನಿರಾಯಾಸವಾಗಿ ಪಂದ್ಯವನ್ನು ಗೆದ್ದಿದ್ದಾರೆ. 
ಮೊದಲು ಬ್ಯಾಟಿಂಗ್ ಮಾಡಿದ್ದ ಜುನಿ ದೊಂಬಿಲ್ಲಿ 5 ಓವರ್ ನಲ್ಲಿ 75 ರನ್ ಪೇರಿಸಿದ್ದು ದೇಸಾಯಿ ತಂಡಕ್ಕೆ 76 ರನ್ ಗಳ ಗುರಿ ನೀಡಿತ್ತು. ಅಂತೆ ಬ್ಯಾಟಿಂಗ್ ಗೆ ಮುಂದಾದ ದೇಸಾಯಿ ತಂಡ 4.5 ಓವರ್ ನಲ್ಲಿ 70 ರನ್ ಗಳಿಸಿತ್ತು. ಆ ವೇಳೆ ಪಂದ್ಯ ಗೆಲ್ಲಲು ಕೊನೆಯ ಎಸೆತದಲ್ಲಿ 6 ರನ್ ಬೇಕಿತ್ತು. ಈ ವೇಳೆ ಬೌಲಿಂಗ್ ಮಾಡಿದ ಜೂನಿ ತಂಡದ ಬೌಲರ್ ಸತತವಾಗಿ ಆರು ಎಸೆತಗಳನ್ನು ಹಾಕಿದ್ದರಿಂದ ದೇಸಾಯಿ ತಂಡ ಗೆಲುವು ಸಾಧಿಸಿದೆ. 
1986ರ ಶಾರ್ಜಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಜಾವಿದ್ ಮಿಯಾಂದಾದ್ ಟೀಂ ಇಂಡಿಯಾದ ಬೌಲರ್ ಚೇತನ್ ಶರ್ಮಾ ಅವರ ಬೌಲಿಂಗ್ ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಐತಿಹಾಸಕ ಗೆಲುವು ಸಾಧಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com