ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಪ್ರಮುಖ ವಿಕೆಟ್ ಕಳೆದುಕೊಂಡ ಆಸೀಸ್ ಆರಂಭಿಕ ಹಿನ್ನಡೆ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ವೇಗಿಗಳು ಬೇಗನೆ ಆಸೀಸ್ ಆರಂಭಿಕ ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ 10 ಓವರ್ ಗಳಲ್ಲಿ 38 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು
ಟೀಂ ಇಂಡಿಯಾ
ಟೀಂ ಇಂಡಿಯಾ

ಅಡಿಲೇಡ್:  ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ವೇಗಿಗಳು  ಬೇಗನೆ ಆಸೀಸ್ ಆರಂಭಿಕ ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.  ಆಸ್ಟ್ರೇಲಿಯಾ 10 ಓವರ್ ಗಳಲ್ಲಿ 38 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಆರನ್ ಪಿಂಚ್ ವೇಗಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಮೊದಲಿಗೆ ಔಟಾದರು. ನಂತರ ಮೊಹಮ್ಮದ್  ಶಮಿ ಓವರ್ ನಲ್ಲಿ  ಶಿಖರ್ ಧವನ್ ಗೆ ಕ್ಯಾಚ್ ನೀಡಿ ಆಸೀಸ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರೆ  ನಿರ್ಗಮಿಸಿದರು.

ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿದ್ದ ಆಸೀಸ್ ಆಟಗಾರರೇ ಎರಡನೇ ಏಕದಿನ ಪಂದ್ಯದಲ್ಲಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಭಾರತ ತಂಡದಲ್ಲಿ ಖಲೀಲ್ ಅಹ್ಮದ್ ಬದಲಿಗೆ ಚೊಚ್ಚಲ ಬಾರಿಗೆ ಮೊಹಮ್ಮದ್ ಸಿರಾಜ್ ಆಟವಾಡುತ್ತಿದ್ದಾರೆ.

ಭಾರತ ತಂಡ ಇಂತಿದೆ. ರೋಹಿತ್ ಶರ್ಮಾ, ಶಿಖರ್ ಧವನ್,  ವಿರಾಟ್ ಕೊಹ್ಲಿ,  ಅಂಬಟ್ಟಿ ರಾಯುಡು,  ಎಂಎಸ್ ಧೋನಿ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ,  ಭುವನೇಶ್ವರ್ ಕುಮಾರ್,  ಕುಲದೀಪ್ ಯಾದವ್,  ಮೊಹಮ್ಮದ್ ಶಿರಾಜ್,  ಮೊಹಮ್ಮದ್ ಶಮಿ

ಆಸ್ಟ್ರೇಲಿಯಾ ತಂಡ ಇಂತಿದೆ. ಆರನ್ ಫಿಂಚ್.  ಅಲೆಕ್ಸ್ ಕ್ಯಾರೆ, ಉಸ್ಮಾನ್ ಕಾವಾಜ, ಎಸ್. ಮಾರ್ಷ,  ಪೀಟರ್ ಹ್ಯಾಂಡ್ಸ್ ಕಾಂಬ್, ಎಂ.ಸ್ಟೊಯಿನಿಸ್,  ಜಿ. ಮ್ಯಾಕ್ಸ್ ವೆಲ್.  ನಾಥನ್ ಲ್ಯಾನ್. ಪೀಟರ್ ಸಿಡ್ಲಿ, ಜೆ. ರಿಚರ್ಡ್ ಸನ್,  ಜೆ. ಬೆಹೆಂಡ್ರೋರ್ಫ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com